ಗೃಹರಕ್ಷಕರ ಸೇವೆ ಅಮೂಲ್ಯ: ಹೆಚ್ಚುವರಿ ಪೊಲೀಸ್ ಅಧೀಕ್ಷಕ ನಟರಾಜ


ಬಳ್ಳಾರಿ,ಮಾ.14: ಜಿಲ್ಲೆಯಲ್ಲಿ ಗೃಹರಕ್ಷಕರು ವಿವಿಧ ಕರ್ತವ್ಯಗಳನ್ನೊಳಗೊಂಡು ಉತ್ತಮವಾಗಿ ತಮ್ಮ ಕಾರ್ಯ ನಿರ್ವಹಿಸುತ್ತಿದ್ದಾರೆ. ಗೃಹರಕ್ಷಕರು ಚುನಾವಣೆ ಮತ್ತು ಇನ್ನೀತರೆ ಸಂದರ್ಭಗಳಲ್ಲಿಯೂ ತಮ್ಮ ಉತ್ತಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಹಾಗೂ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಎಂ.ಎ.ನಟರಾಜ್ ಅವರು ಹೇಳಿದರು.
ನಗರದ ಜಿಲ್ಲಾ ಗೃಹರಕ್ಷಕದಳ ಕಚೇರಿ ಆವರಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಗೃಹರಕ್ಷಕರ ವಾರ್ಷಿಕೋತ್ಸವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಗೃಹರಕ್ಷಕ ದಳದಿಂದ ವಾರ್ಷಿಕೋತ್ಸವ ದಿನಾಚರಣೆ ಮಾಡುವುದು ಬಹಳ ಸಂತೋಷದ ವಿಷಯವಾಗಿದೆ. ಇದೇ ಸಂದರ್ಭದಲ್ಲಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಎಲ್ಲಾ ಗೃಹರಕ್ಷಕರಿಗೆ ಗೃಹರಕ್ಷಕ ವಾರ್ಷಿಕೋತ್ಸವ ದಿನಾಚರಣೆಯ ಶುಭಾಶಯ ತಿಳಿಸಿದರು.
ಈ ಸಂದರ್ಭದಲ್ಲಿ ಗೃಹರಕ್ಷಕದಳದ ಉಪ ಸಮಾದೇಷ್ಟರಾದ ಬಿ.ಎಸ್.ಕಾಂಬಳೆ, ಭೋಧಕ ಬಸವರಾಜ್ ಹಗಳಗಾರ, ಘಟಕಾಧಿಕಾರಿ ಜೆ.ಸುರೇಶ್, ಸೀನಿಯರ್ ಪ್ಲಟೂನ್‍ಕಮಾಂಡರ್  ಬಿ.ಕೆ.ಬಸವಲಿಂಗ, ಎಂ.ಎಂ.ಹಳ್ಳಿಯ ಘಟಕಾಧಿಕಾರಿ ವಾಲ್ಯ ನಾಯ್ಕ್, ಹೊಸಪೇಟೆ ಘಟಕಾಧಿಕಾರಿ ಎಸ್.ಎಂ.ಗಿರಿಶ್, ಪ್ರದಸ ಬಿ.ಎನ್.ಗೋಪಿನಾಥ ಸೇರಿದಂತೆ ಜಿಲ್ಲೆಯ ವಿವಿಧ ಘಟಕಗಳ ಗೃಹರಕ್ಷಕ ಅಧಿಕಾರಿಗಳು, ನಿವೃತ್ತ ಅಧಿಕಾರಿಗಳು, ಗೃಹರಕ್ಷಕರು ಮತ್ತು ಅವರ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.
ಬಳ್ಳಾರಿ ಜಿಲ್ಲೆ ಮತ್ತು ವಿಜಯನಗರ ಜಿಲ್ಲೆಯ ವಿವಿಧ ಘಟಕಗಳ ಗೃಹರಕ್ಷಕರು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗಾಯನ, ನೃತ್ಯ, ಸಮೂಹ ನೃತ್ಯ, ಮ್ಯಾಜಿಕ್ ಶೋ ಮತ್ತು ಜಾನಪದ ಗೀತೆಗಳನ್ನು ಹಾಡಿದರು.