ಗೃಹರಕ್ಷಕದಳ ಪ್ರಾದೇಶಿಕ ತರಬೇತಿ ಶಿಬಿರಕ್ಕೆ ಚಾಲನೆ


ದಾವಣಗೆರೆ.ನ.೧೧; ಜಿಲ್ಲಾ ಪೊಲೀಸ್ ಅಧೀಕ್ಷಕರವರಾದ  ಸಿ.ಬಿ.ರಿಷ್ಯಂತ್  ಅವರು ದಾವಣಗೆರೆ ಜಿಲ್ಲೆಯ ಗೃಹರಕ್ಷಕ ದಳ ವತಿಯಿಂದ ಗೃಹ ರಕ್ಷಕ ದಳ ಪ್ರಾದೇಶಿಕ ತರಬೇತಿ ಕೇಂದ್ರ, ದೇವರಬೆಳಕೆರೆಯಲ್ಲಿ ನೂತನ ಗೃಹ ರಕ್ಷಕರರ ವಾರ್ಷಿಕ ಮೂಲ ತರಬೇತಿ ಶಿಬಿರದ ಉದ್ಘಾಟನೆ ನೆರವೇರಿಸಿದರು.ಸಮಾರಂಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರಾದ  ರಾಜೀವ್ ಎಂ. ನಿವೃತ್ತ ಹೋಮ್ ಗಾರ್ಡ್ ಕಾಮಾಡೆಂಟ್   ಮಹಾಲಿಂಗಪ್ಪ,  ವೀರಪ್ಪ, ಡಿಎಆರ್ ಡಿವೈಎಸ್ಪಿ  ಪ್ರಕಾಶ್ , ಅಗ್ನಿಶಾಮಕ ದಳದ ಶ ಬಸವ ಪ್ರಭು ಶರ್ಮ ಸೇರಿದಂತೆ ಹೋಮ್ ಗಾರ್ಡ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು  ಉಪಸ್ಥಿತರಿದ್ದರು.