ಗೃಹಬಳಕೆ ಸಿಲಿಂಡರ್ ಅಕ್ರಮವಾಗಿ ಆಟೋಗಳಿಗೆ ಬಳಕೆ

ಕಲಬುರಗಿ,ಡಿ.9-ನಗರದ ಜುಬೇರ್ ಕಾಲೋನಿಯ ಮನೆಯೊಂದರಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಗೃಹ ಬಳಕೆಯ ಸಿಲಿಂಡರ್‍ಗಳನ್ನು ಅನಧಿಕೃತವಾಗಿ ಸಂಗ್ರಹಿಸಿ ಹೆಚ್ಚಿನ ದರದಲ್ಲಿ ಆಟೋಗಳಿಗೆ ತುಂಬುತ್ತಿದ್ದ ಜಾಲವನ್ನು ಆಹಾರ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಜುಬೇರ್ ಕಾಲೋನಿಯ ಮನೆಯೊಂದರಲ್ಲಿ ಅಡುಗೆಗೆ ಉಪಯೋಗಿಸುವ ಗ್ಯಾಸ್ ಸಿಲಿಂಡರ್‍ಗಳನ್ನು ಅಕ್ರಮವಾಗಿ ಸಂಗ್ರಹಿಸಿ ಆಟೋರಿಕ್ಷಾಗಳಿಗೆ ತುಂಬಲಾಗುತ್ತಿದೆ ಎಂಬ ಮಾಹಿತಿ ಮೇಲೆ ಆಹಾರ ಸಿರಸ್ತೆದಾರ ಅಮರೇಶ ಹಾಗೂ ಸಬ್ ಅರ್ಬನ್ ಪೊಲೀಸ್ ಠಾಣೆಯ ಪಿಎಸ್‍ಐ ಕವಿತಾ ಚವ್ಹಾಣ್, ಸಿಬ್ಬಂದಿಗಳಾದ ಅನೀಲ, ವೆಂಕಟೇಶ, ವಿಶಾಲ್ ಅವರು ದಾಳಿ ನಡೆಸಿ ಅಬ್ದುಲ್ ಶಕೀಬ್ ಎಂಬಾತನನ್ನು ಬಂಧಿಸಿ 5 ಸಾವಿರ ರೂ.ಮೊತ್ತದ 4 ಗ್ಯಾಸ್ ಸಿಲಿಂಡರ್ ಮತ್ತು 3 ಸಾವಿರ ರೂ.ಮೊತ್ತದ ತೂಕದ ಯಂತ್ರ ಜಪ್ತಿ ಮಾಡಿದ್ದಾರೆ. ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.