ಗೃಹಬಳಕೆಯ ಎಲ್ ಪಿಜಿ ನಾಳೆಯಿಂದ 10 ರೂ. ಕಡಿತ

ನವದೆಹಲಿ, ಮಾ.31-ಕಳೆದ ಕೆಲವು‌ ದಿನಗಳಿಂದ‌‌ ಹೆಚ್ಚಳವಾಗುತ್ತಿದ್ದ ಪ್ರತಿ ಸಿಲಿಂಡರ್ ಬೆಲೆ ಅದರಲ್ಲಿಯೂ ಗೃಹ ಬಳಕೆಯ ಸಿಲಿಂಡರ್ ನಾಳೆಯಿಂದ 10 ರೂಪಾಯಿ ಕಡಿಮೆಯಾಗಿಲಿದೆ.

ಕಳೆದ ಕೆಲ ತಿಂಗಳಿನಿಂದ ನಿತ್ಯ ಏರಿಕೆಯಾಗುತ್ತಿದ್ದ ಬೆಲೆ ಏರಿಕೆ‌ ಇಳಿಕೆಯಾಗುವುದರಿಂದ ತುಸು ನೆಮ್ಮದಿಯ ನಿಟ್ಟಿಸಿರುವ ಬಿಡುವಂತಾಗಿದೆ.

ಪ್ರತಿ ಸಿಲಿಂಡರ್ ಬೆಲೆಯನ್ನು ನಾಳೆಯಿಂದ 10 ರೂಪಾಯಿ ಕಡಿತ ಮಾಡುವ ನಿರ್ಧಾರವನ್ನು ಭಾರತೀಯ ತೈಲ‌ ನಿಗಮ ಖಚಿತ ಪಡಿಸಿದೆ‌

ಜನವರಿಯಲ್ಲಿ ಪ್ರತಿ‌‌ ಸಿಲಿಂಡರ್ ಬೆಲೆ ದೆಹಲಿಯಲ್ಲಿ 819 ರೂಪಾಯಿಗೆ ತಗುಲಿತ್ತು.ಅದಕ್ಕೂ ಮುನ್ನ ದೆಹಲಿಯಲ್ಲಿ ಸಿಲಿಂಡರ್ ಬೆಲೆ 694 ರೂಪಾಯಿ ಇತ್ತು.

ಫೆಬ್ರವರಿ 15 ರಂದು 719 ರೂಪಾಯಿ, ಫೆಬ್ರವರಿ 25 ರಂದು, 769 ರೂಪಾಯಿಯಿಂದ 794ಕ್ಕೆ ಏರಿಕೆಯಾಗಿತ್ತು. ಮಾರ್ಚ್ ನಲ್ಲಿ ಈ ಬೆಲೆ 819ಕ್ಕೆ ಏರಿಕೆಯಾಗಿತ್ತು.

ಕೋಲ್ಕತಾ ದಲ್ಲಿ ಪ್ರತಿ‌ ಸಿಲಿಂಡರ್ ಬೆಲೆ 845 ರೂಪಾಯಿ, ಚೆನ್ನೈ ನಲ್ಲಿ 835 ಹಾಗು ಮುಂಬೈನಲ್ಲಿ 819 ರೂಪಾಯಿ ಯಷ್ಟು ಪ್ರತಿ ಸಿಲಿಂಡರ್ ಬೆಲೆ ಇದೆ.

ಇಳಿಕೆ:

ಪಂಚ ರಾಜ್ಯಗಳ ಚುನಾವಣೆ ಮತದಾನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ತುಸು ಕಡಿಮೆಯಾಗಿದೆ.