ಗೃಹಜ್ಯೋತಿ ಯೋಜನೆಗೆ ನಾಳೆ ಸಿಎಂ ಚಾಲನೆ

ಕಲಬುರಗಿ,ಆ.4: ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಪೈಕಿ
ಒಂದಾಗಿರುವ ಗೃಹಜ್ಯೋತಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ
ಅವರು ಶನಿವಾರ ನಗರದ ಎನ್.ವಿ.ಮೈದಾನದಲ್ಲಿ ನಡೆಯಲಿರುವ ಬೃಹತ್
ಸಮಾವೇಶದಲ್ಲಿ ಚಾಲನೆ ನೀಡಲಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ
ಪಂಚಾಯತ್ ರಾಜ್, ಐಟಿ-ಬಿಟಿ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಈ ಸಂಬಂಧ ಕರೆದಿದ್ದ
ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಚುನಾವಣೆ ವೇಳೆ
ಕಾಂಗ್ರೆಸ್ ಪಕ್ಷ ಸಿದ್ದಪಡಿಸಿದ್ದ ಪ್ರಣಾಳಿಕೆಗೆ ಅನುಗುಣವಾಗಿ ಐದು ಪ್ರಮುಖ
ಗ್ಯಾರಂಟಿಗಳನ್ನು ಘೋಷಿಸಲಾಗಿತ್ತು. ಈ ಪೈಕಿ ಒಂದೊಂದೇ ಗ್ಯಾರಂಟಿ
ಜಾರಿಗೊಳಿಸಲಾಗುತ್ತಿದೆ. ರಾಜ್ಯ ಸರಕಾರ ಜನಪರ ಆಡಳಿತ ನೀಡುತ್ತಿದೆ ಎಂಬಸಂದೇಶ ರವಾನಿಸುವ ನಿಟ್ಟನಲ್ಲಿ ನಾಳೆ ಕಲಬುರಗಿ ನಗರದಲ್ಲಿ ಗೃಹಜ್ಯೋತಿಯೋಜನೆಗೆ ಚಾಲನೆ ನೀಡಲಾಗುತ್ತಿದ್ದು, ಎನ್.ವಿ.ಮೈದಾನದಲ್ಲಿ ಬೆಳಗ್ಗೆ 10ಕ್ಕೆನಡೆಯಲಿರುವ ಬೃಹತ್ ಸಮಾವೇಶದಲ್ಲಿ ಔಪಚಾರಿಕವಾಗಿ 10ಫಲಾನುಭವಿಗಳಿಗೆ ಮುಖ್ಯಮಂತ್ರಿಗಳು ‘ಶೂನ್ಯ ವಿದ್ಯುತ್ ಬಿಲ್’ ರಸೀದಿ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಗೃಹಜ್ಯೋತಿ ಯೋಜನೆಯಡಿ ರಾಜ್ಯದಲ್ಲಿ ಒಟ್ಟು 1,41,23,240
ಫಲಾನುಭವಿಗಳು ನೋಂದಣಿ ಮಾಡಿಕೊಂಡಿದ್ದು, ಕಲಬುರಗಿ ಜಿಲ್ಲೆಯಲ್ಲಿ
4,69,029 ಫಲಾನುಭವಿಗಳು ಯೋಜನೆಯ ಲಾಭ ಪಡೆಯಲು ನೋಂದಣಿ ಮಾಡಿಕೊಂಡಿದ್ದಾರೆ ಎಂದರು.
ರಾಜ್ಯ ಸರಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದೆ. ಈ ಮಾತಿಗೆ
ಬದ್ಧವಾಗಿ ಈಗಾಗಲೇ ಶಕ್ತಿ ಯೋಜನೆಯನ್ನು ರಾಜ್ಯದಲ್ಲಿ ಅನುಷ್ಠಾನಕ್ಕೆ
ತರಲಾಗಿದೆ. ಆಗಸ್ಟ್ 18ರಂದು ಗೃಹಲಕ್ಷ್ಮಿ ಯೋಜನೆಗೆ ಚಾಲನೆ
ನೀಡಲಾಗುತ್ತಿದೆ. ಅನ್ಯಭಾಗ್ಯ ಯೋಜನೆಯಡಿ ಪ್ರತಿ ವ್ಯಕ್ತಿಗೆ 10 ಕೆ.ಜಿ. ಅಕ್ಕಿ
ನೀಡುವುದಾಗಿ ಘೋಷಿಸಿದ್ದರೂ, ಕೇಂದ್ರ ಸರಕಾರದ ಅಸಹಕಾರದಿಂದಾಗಿ
ಐದು ಕೆ.ಜಿ. ಅಕ್ಕಿ ಮತ್ತು ಉಳಿದ ಐದು ಕೆ.ಜಿ. ಅಕ್ಕಿಗೆ ಸಮಾನವಾಗಿ ಅಕ್ಕಿಯ
ಹಣವನ್ನು ಫಲಾನುಭವಿಗಳಿಗೆ ನೇರ ಲಾಭ ವರ್ಗಾವಣೆ (ಡಿಬಿಟಿ) ಅಡಿ ಅವರ ಬ್ಯಾಂಕ್ ಖಾತೆಗಳಿಗೆ ಹಾಕಲಾಗಿದೆ. ಈ ಪೈಕಿ ಈಗಾಗಲೇ ಶೇ.70ರಷ್ಟು ಫಲಾನುಭವಿಗಳಿಗೆ ಹಣ ತಲುಪಿದ್ದು, ಉಳಿದವರಿಗೆ ಇಷ್ಟರಲ್ಲೇ ಹಣ ತಲುಪಲಿದೆ. ಯುವನಿಧಿ ಯೋಜನೆ ಪ್ರಸಕ್ತ ಶೈಕ್ಷಣಿಕ ವರ್ಷ ಮುಗಿದ
ನಂತರ ಜಾರಿಯಾಗಲಿದೆ ಎಂದು ನುಡಿದರು.
ಗ್ಯಾರಂಟಿ ಯೋಜನೆಗಳಿಂದ ಇತರೆ ಯೋಜನೆಗಳಿಗೆ ಅನುದಾನದ ಕೊರತೆ
ಎದುರಾಗಲಿದೆ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ
ಅವರು, ಗ್ಯಾರಂಟಿ ಯೋಜನೆಗಳ ಜಾರಿಗೆ ಅಗತ್ಯ ಅನುದಾನವನ್ನು
ಈಗಾಗಲೇ ತೆಗೆದಿರಿಸಲಾಗಿದೆ. ಯಾವುದೇ ಪ್ರಮುಖ ಯೋಜನೆಗಳಿಗೆ
ಹಣಕಾಸಿನ ಕೊರತೆ ಕಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ವಿದ್ಯುಚ್ಛಕ್ತಿ ಕಂಪನಿಗಳಿಗೆ ಸರ್ಕಾರದ ಬೇರೆ ಬೇರೆ ಇಲಾಖೆಗಳಿಂದ ಬಾಕಿ
ಬರಬೇಕಿದ್ದು, ಸಾವಿರಾರು ಕೋಟಿ ಬಿಲ್ ಬಾಕಿಯಿದೆ. ಸರಕಾರದ ಸಂಸ್ಥೆಗಳೇಹೀಗೆ ಬಾಕಿ ಉಳಿಸಿಕೊಂಡರೆ ಹೇಗೆ? ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವ ಪ್ರಿಯಾಂಕ್,ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆಯಿಂದ ವಿದ್ಯುಚ್ಛಕ್ತಿ ಕಂಪನಿಗೆ ನೀಡಬೇಕಿರುವ ಸುಮಾರು ರೂ.4000 ಕೋಟಿ ಸಬ್ಸಿಡಿ ಬಿಲ್‍ಹಂತಹಂತವಾಗಿ ಪಾವತಿಸುವುದಾಗಿ ಈಗಾಗಲೇ ಇಂಧನ ಸಚಿವರಿಗೆ ತಿಳಿಸಲಾಗಿದೆ.
ಒಂದುವೇಳೆ, ಸಾಧ್ಯವಾದರೆ ಏಕಕಾಲದಲ್ಲಿ ಸೆಟಲ್ ಮಾಡಲು ಸಾಧ್ಯವಾದರೆ
ಅದನ್ನೂ ಮಾಡಲು ಸಿದ್ಧ ಎಂದರು.ಕಲಬುರಗಿ ನಗರದಲ್ಲಿ ಎಲ್ ಅಂಡ್ ಟಿ ಕಂಪನಿಯವರು ನೀರು ಸರಬರಾಜುಕಾಮಗಾರಿಯ ಭಾಗವಾಗಿ ತೋಡಿದ್ದ ನೀರಿನ ಗುಂಡಿಯಲ್ಲಿ ಬಿದ್ದು ಇಬ್ಬರುಬಾಲಕರು ಮೃತಪಟ್ಟ ದುರ್ಘಟನೆ ಕುರಿತು ಪ್ರಸ್ತಾಪಿಸಿ ವಿಷಾದ ವ್ಯಕ್ತಪಡಿಸಿದಸಚಿವರು, ಈಗಾಗಲೇ ಸಂತ್ರಸ್ತ ಕುಟುಂಬಗಳಿಗೆ ಸರಕಾರದಿಂದ ಸಾಂತ್ವನಹೇಳಲಾಗಿದೆ. ಮೇಲಾಗಿ, ಬಾಲಕರ ಕುಟುಂಬಗಳಿಗೆ ಎಲ್ ಅಂಟ್ ಟಿ ಕಂಪನಿಯಿಂದ
ಅಗತ್ಯ ಪರಿಹಾರ ಸಹ ನೀಡುವಂತೆ ಕ್ರಮ ಕೈಗೊಳ್ಳಲಾಗಿದೆ. ಈ
ದುರ್ಘಟನೆಗೆ ಸಂಬಂಧಿಸಿದಂತೆ ಎಲ್ ಅಂಡ್ ಟಿ ಹಾಗೂ ಕಲಬುರಗಿ ಮಹಾನಗರ ಪಾಲಿಕೆಯ ಜೊತೆಗೆ ತಾವು ಸಹ ಜವಾಬ್ದಾರರು ಎಂದು ಬೇಸರ ವ್ಯಕ್ತಪಡಿಸಿದರು.


ಯಾರ್ಯಾರು ಭಾಗಿ?
ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಎಐಸಿಸಿ
ಅಧ್ಯಕ್ಷ ಹಾಗೂ ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ
ಖರ್ಗೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ರಾಜ್ಯದ ಇಂಧನ ಖಾತೆಸಚಿವ ಕೆ.ಜೆ. ಜಾರ್ಜ್ ಸೇರಿದಂತೆ ಕಲಬುರಗಿ ಸೇರಿದಂತೆ ವಿವಿಧ ಕ್ಷೇತ್ರಗಳ ಶಾಸಕರು ಪಾಲ್ಗೊಳ್ಳಲಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.


ಜೆಡಿಎಸ್ ಪಕ್ಷಕ್ಕೆ ಅಸ್ತಿತ್ವ ಎಲ್ಲಿದೆ?
ರಾಜ್ಯದಲ್ಲಿ ಜೆಡಿಎಸ್ ಪಕ್ಷ ತನ್ನ ಅಸ್ತಿತ್ವ ಕಳೆದುಕೊಂಡಿದೆ. ಅದೊಂದು
ಮುಳುಗುತ್ತಿರುವ ಹಡಗು. ಹೀಗಾಗಿ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ
ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ
ವ್ಯಂಗ್ಯವಾಡಿದರು.ಈ ಹಿಂದೆ ಮಾಜಿ ಸಿಎಂ ಎಚ್‍ಡಿಕೆ ಅವರ ಸರಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದಾಗಎಚ್‍ಡಿಕೆ ಅವರ ಕಾರ್ಯಶೈಲಿಯನ್ನು ತೀರಾ ಹತ್ತಿರದಿಂದ ಗಮನಿಸಿದ್ದೇನೆ.ಅವರು ಅತ್ಯಂತ ಪ್ರಗತಿಪರವಾಗಿ ಯೋಚಿಸುವ ವ್ಯಕ್ತಿ. ಈಗ ಹೀಗ್ಯಾಕೆಮಾತನಾಡುತ್ತಿದ್ದಾರೋ ಗೊತ್ತಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದರು.ಎಚ್‍ಡಿಕೆ ತಮ್ಮ ಬಳಿ ಪೆನ್ ಡ್ರೈವ್ ಇದೆ ಎಂದವರು ಈಗ ಯಾವುದೇ ಪೆನ್‍ಡ್ರೈವ್‍ಬಿಡುಗಡೆ ಮಾಡುವುದಿಲ್ಲ ಎಂದಿದ್ದಾರೆ. ಇಷ್ಟಕ್ಕೂ ಅವರ ಬಳಿ ಪೆನ್‍ಡ್ರೈವ್‍ಇರುವುದೇ ನಿಜವಾಗಿದ್ದಲ್ಲಿ ಅದನ್ನು ಬಿಡುಗಡೆ ಮಾಡುವಂತೆ ಮೊದಲಿನಿಂದಲೂನಾವು ತಾಕೀತು ಮಾಡುತ್ತಿದ್ದೇವೆ. ಒಂದುವೇಳೆ, ಹಾಗೊಂದುಪೆನ್‍ಡ್ರೈವ್‍ನಲ್ಲಿರುವ ಅಂಶಗಳನ್ನು ಬಹಿರಂಗಪಡಿಸಿದರೆ ಆ ಕುರಿತು ತನಿಖೆ ನಡೆಸಲು ಸರಕಾರ ಬದ್ಧವಾಗಿದೆ ಎಂದು ನುಡಿದರು.


ಸಚಿವ ಪ್ರಿಯಾಂಕ್ ಪ್ರಸ್ತಾಪಿಸಿದ ಅಂಶಗಳು
*ಗೃಹ ಬಳಕೆಯ ಗ್ಯಾಸ್ ಸಿಲೆಂಡರ್‍ನಿಂದ 2 ಕೆಜಿ ಅನಿಲವನ್ನು ಅಕ್ರಮವಾಗಿ
ಮಾರಾಟ ಮಾಡುತ್ತಿರುವ ಜಾಲದ ಕುರಿತು ಗಮನಕ್ಕೆ ಬಂದಿದೆ.
ಗೃಹಲಕ್ಷ್ಮಿ ಯೋಜನೆ ಚಾಲನಾ ಕಾರ್ಯಕ್ರಮ ಮುಗಿದ ಬಳಿಕ ಈ
ಕುರಿತು ಅಗತ್ಯ ಕ್ರಮ ಕೈಗೊಳ್ಳಲಾಗುವುದು.

  • ಅಫಜಲಪುರ ತಾಲೂಕಿನ ಅವರಾದ (ಕೆ) ಗ್ರಾಮವನ್ನು ನೆರೆಪೀಡಿತ
    ಗ್ರಾಮ ಎಂದು ಪರಿಗಣಿಸಿ ಸ್ಥಳಾಂತರ ಮಾಡಲಾಗಿದೆ. ಅಲ್ಲಿ ಮೂಲ
    ಸೌಲಭ್ಯ ಕಲ್ಪಿಸುವ ಕುರಿತು ಶಾಸಕರೊಂದಿಗೆ ಈಗಾಗಲೇ
    ಚರ್ಚಿಸಿದ್ದೇನೆ.
  • ಮಾಜಿ ಸಚಿವರು ಹಾಗೂ ಶಾಸಕ ಬಸವರಾಜ ರಾಯರೆಡ್ಡಿ ಅವರು ಹಿರಿಯರು.ಯಾಕೆ ಹಾಗೆಲ್ಲಾ ಮಾತನಾಡುತ್ತಿದ್ದಾರೋ ಗೊತ್ತಾಗುತ್ತಿಲ್ಲ. ನಾನು
    ಸಚಿವನಾಗಿ ಅವರು ಹೇಳಿದ ಎಲ್ಲ ಕೆಲಸಗಳನ್ನು ಮಾಡಿಕೊಟ್ಟಿದ್ದೇನೆ.
  • ಮಲ್ಲಿಕಾರ್ಜುನ ಖರ್ಗೆ ಅವರ ಕುರಿತು ಅರಗ ಜ್ಞಾನೇಂದ್ರ ಅವರು
    ಹೇಳಿಕೆ ನೀಡಿದ ಬಳಿಕ ಅವರ ಮೇಲೆ ನನಗಿದ್ದ ಗೌರವ ಕಡಿಮೆಯಾಗಿದೆ.
    ಇದು ಕೇಶವ ಕೃಪಾದ ಪ್ರೇರಣೆ. ಇಂತಹ ಅಸಹನೆ ಹೆಚ್ಚು ದಿನ
    ಉಳಿಯುವುದಿಲ್ಲ. ಏಕೆಂದರೆ, ರಾಜ್ಯದಲ್ಲಿ ಈಗ ಬಸವ ತತ್ವ ಮತ್ತು
    ಬಾಬಾಸಾಹೇಬರ ಸಂವಿಧಾನದ ತತ್ವದ ಮೇಲೆ ಸರಕಾರಕಾರ್ಯನಿರ್ವಹಿಸುತ್ತಿದೆ.