ಚನ್ನಮ್ಮನ ಕಿತ್ತೂರ,ಜೂ.19:ಜೂನ್ 18 ರಿಂದ ಸರ್ಕಾರದಿಂದ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆಯಡಿಯಲ್ಲಿ ಹೆಸರು ನೋಂದಣಿ ಪ್ರಾರಂಭವಾಗಿದೆ ಎಂದು ಕೆಇಬಿ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಮಹೇಶ್ವರ ಹಿರೇಮಠ ಹೇಳಿದರು.
ಪಟ್ಟಣದ ಹೆಸ್ಕಾಂ ಕಛೇರಿಯಲ್ಲಿ ನಡೆದ ಗ್ರಾಹಕರ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕಿತ್ತೂರಿನ ಹೆಸ್ಕಾಂ ಕಛೇರಿಯಲ್ಲಿ ಕೌಂಟರ್ ಪ್ರಾರಂಭಿಸಲಾಗುವುದು. ಸಾರ್ವಜನಿಕರ ಅನೂಕೂಲಕ್ಕಾಗಿ ಕೌಂಟರ್ ಪ್ರಾರಂಬಿಸಿದೆ. ಅದೇ ರೀತಿ ಪಟ್ಟಣದ ಎಂ.ಕೆ ಹುಬ್ಬಳ್ಳಿಯಲ್ಲಿ ಹೆಸ್ಕಾಂ ಕಚೇರಿಯಲ್ಲಿ ಪ್ರಾರಂಭಿಸಲಾಗಿದೆ. ಹೆಸರು ನೋಂದಾಯಿಸಲು ಬರುವ ಗ್ರಾಹಕರು ಮೊಬೈಲ್ ಲಿಂಕ್ ಹೊಂದಿರುವ ಆಧಾರ್‍ಕಾರ್ಡ, ಲೈಟ್ ಬಿಲ್ ರಶೀದಿ, ಐಡಿ, ಹಾಗೂ ಸ್ಮಾರ್ಟ ಮೊಬೈಲ್‍ನಲ್ಲಿ ಮತ್ತು ಗ್ರಾಮ ಒನ್ ಕೇಂದ್ರಗಳಲ್ಲಿ ತಮ್ಮ ಹೆಸರನ್ನು ನೋಂದಾಯಿಸಬಹುದಾಗಿದೆ.
ಈ ಯೋಜನೆ ಬಾಡಿಗೆದಾರರಿಗೂ ಲಭ್ಯವಿರುತ್ತದೆ. ತಮ್ಮ ಆಧಾರ, ಬಾಡಿಗೆ ಇದ್ದ ಮನೆಯ ಗ್ರಾಹಕರ ಐಡಿ, ಮೊಬೈಲ್ ನಂಬರ ದಾಖಲಿಸುವ ಮೂಲಕ ಈ ಯೋಜನೆಯ ಲಾಭ ಪಡೆದುಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ಬೈಲಹೊಂಗಲ ಅಭಿಯಂತರ ಕೆ ಎ ಜೈನ್, ಕಿತ್ತೂರ ಎಸ್ ಓ ಗಳಾದ ಜಗದೀಶ ಸಂಶಿ, ಈರಣ್ಣಾ ಬಡಿಗೇರ ಸೇರಿದಂತೆ ಸಾರ್ವಜನಿರಿದ್ದರು.