ಕೋಲಾರ,ಜೂ,೨೦- ರಾಜ್ಯದ ಕಾಂಗ್ರೇಸ್ ಸರ್ಕಾರ ಜನತೆಗೆ ನೀಡಿರುವಂತ ೫ ಗ್ಯಾರೆಂಟಿಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆಗೆ ನೋಂದಣಿ ಪ್ರಕ್ರಿಯೆ ನಗರದ ಬೆಸ್ಕಾಂ ಕಚೇರಿಯ ಚಾಲನೆ ನೀಡಲಾಯಿತು,
ಗ್ರಾಹಕರು ಸರದಿಯ ಸಾಲಿನಲ್ಲಿ ನಿಂತು ನೋಂದಣಿ ಮಾಡಿಸಿಕೊಳ್ಳಲು ಮುಂದಾದರು, ಬೆಸ್ಕಾಂ ಸಿಬ್ಬಂದಿಗಳು ಗ್ರಾಹಕರ ದಾಖಲೆಗಳನ್ನು ಪರಿಶೀಲಿಸಿ ನೊಂದಣಿಯನ್ನು ಮಾಡುವಲ್ಲಿ ನಿರತರಾಗಿದ್ದರು. ಗ್ರಾಹಕರಿಗೆ ಅಗತ್ಯವಾದ ಮಾಹಿತಿಗಳನ್ನು ತಿಳಿಸುವ ಮೂಲಕ ನೊಂದಣಿಯನ್ನು ಮಾಡಿ ಕೊಳ್ಳುತ್ತಿರುವುದು ಕಂಡು ಬಂದಿತು.
ಈ ಸಂದರ್ಭದಲ್ಲಿ ಸರ್ವರ್ ಆಗಾಗ್ಗೆ ಕೈ ಕೊಡುತ್ತಿದ್ದವು. ಗ್ರಾಹಕರು ಬೇಸರದಿಂದ ಕಾಲವನ್ನು ಕಳೆಯ ಬೇಕಾಗಿ ಬಂದಿತು, ಈ ಸಂದರ್ಭದಲ್ಲಿ ಕೆಲವರು ಮನೆಗಳಿಗೆ ವಾಪಾಸ್ಸಾದ ಪ್ರಕರಣವು ನಡೆಯಿತು.
ಈ ಸಂದರ್ಭದಲ್ಲಿ ನಗರದ ಬೆಸ್ಕಾಂ ಕಚೇರಿಯ ಸಹಾಯಕ ಕಾರ್ಯಪಾಲಕ ಅಭಯಂತರರಾದ ಸ್ವಾಮಿಯವರು ಮಾದ್ಯಮದವರೊಂದಿಗೆ ಮಾತನಾಡಿ ಗ್ರಾಹಕರು ತಮ್ಮ ಅಧಾರ್ ಕಾರ್ಡ್, ವಿದ್ಯುತ್ ಬಿಲ್ ತಂದು ನೊಂದಣಿಯನ್ನು ಮಾಡಿಸಿ ಕೊಳ್ಳ ಬೇಕು, ಬಾಡಿಗೆದಾರರು, ಲೀಸ್‌ನಲ್ಲಿರುವವರು ಸಹ ಆಧಾರ ಕಾರ್ಡ್ ವಿದ್ಯುತ್ ಬಿಲ್ ಸಂಬಂಧ ಪಟ್ಟ ದಾಖಲೆಯನ್ನು ತಂದು ನೋಂದಣಿ ಮಾಡಿಸ ಬೇಕು ಎಂದರು.
ನೊಂದಣಿ ಕಾರ್ಯವು ಇಂದಿನಿಂದ ಪ್ರಾರಂಭಿಸಲಾಗಿದೆ. ಸದ್ಯಕ್ಕೆ ಸರ್ವರ್ ಸಮಸ್ಯೆ ಇದೆ. ಮುಂದಿನ ದಿನಗಳಲ್ಲಿ ಯಾವೂದೇ ಸಮಸ್ಯೆ ಆಗದಂತೆ ನೋಂದಣಿ ಕಾರ್ಯ ಸುಲಭವಾಗುವಂತೆ ಮಾಡಲಾಗುವುದು ಎಂದು ತಿಳಿಸಿದರು.