ಬೆಂಗಳೂರು, ಜು.೨: ಗೃಹಜ್ಯೋತಿ ಯೋಜನೆಯಡಿ ೨೦೦ ಯುನಿಟ್‌ಗಳ ಉಚಿತ ವಿದ್ಯುತ್ ಪಡೆಯಲು ಜುಲೈ ೨೫ರೊಳಗೆ ನೋಂದಾಯಿಸಿಕೊಳ್ಳಬೇಕು. ಜುಲೈ ೨೫ರೊಳಗೆ ನೋಂದಾಯಿಸಿಕೊಂಡರೆ ಜುಲೈನಲ್ಲಿ ಉಚಿತ ವಿದ್ಯುತ್‌ನ ಲಾಭ ಪಡೆಯಬಹದು. ಹಾಗಾಗಿ ಶೀಘ್ರ ನೋಂದಣಿ ಮಾಡಿಕೊಳ್ಳಿ ಎಂದು ಇಂಧನ ಇಲಾಖೆ ತಿಳಿಸಿದೆ.
ಗೃಹಜ್ಯೋತಿ ಯೋಜನೆಯ ನೋಂದಣಿಗೆ ಅಂತಿಮ ದಿನಾಂಕದ ಗಡುವು ಇಲ್ಲ ಎಂದು ಸ್ಪಷ್ಟಪಡಿಸಿರುವ ಇಂಧನ ಇಲಾಖೆ ಜುಲೈ ೨೫ರ ನಂತರ ಆಗಸ್ಟ್ ೨೫ರೊಳಗೆ ನೋಂದಣಿ ಮಾಡಿಕೊಂಡರೆ ಆಗಸ್ಟ್ ತಿಂಗಳಲ್ಲಿ ಗೃಹಜ್ಯೋತಿ ಲಾಭ ಸಿಗಲಿದೆ.
ಪ್ರತಿ ತಿಂಗಳ ಮೀಟರ್ ರೀಡಿಂಗ್ ೨೫ನೇ ತಾರೀಖಿನಿಂದ ಮುಂದಿನ ತಿಂಗಳ ೨೫ನೇ ತಾರೀಖಿನವರೆಗೆ ನಡೆಯುತ್ತದೆ ಎಂದು ಹೇಳಿದೆ.
ಹಾಗಾಗಿ, ಗೃಹಜ್ಯೋತಿ ಲಾಭ ಪಡೆಯುವ ಗ್ರಾಹಕರು ಆದಷ್ಟು ಬೇಗ ನೋಂದಣಿ ಮಾಡಿಕೊಳ್ಳಿ ಎಂದು ಇಲಾಖೆ ಹೇಳಿದೆ.