ಗೃಹಜ್ಯೋತಿ: ಜೆಸ್ಕಾಂ ವ್ಯಾಪ್ತಿಯಲ್ಲಿ 20.22 ಲಕ್ಷ ನೋಂದಣಿ

ಕಲಬುರಗಿ,ಆ.3-ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ಸೌ¯ಭ್ಯದ ಗೃಹ ಜ್ಯೋತಿ ಯೋಜನೆಗ ಜೆಸ್ಕಾಂ ವ್ಯಾಪ್ತಿಯ 7 ಜಿಲ್ಲೆಗಳಲ್ಲಿ ಇಲ್ಲಿಯವರೆಗೆ 20.22 ಲಕ್ಷ ಗ್ರಾಹಕರು ನೋಂದಣಿ ಮಾಡಿಸುವ ಮೂಲಕ ಅಭೂತಪೂರ್ವ ಸ್ಪಂದನೆ ನೀಡಿದ್ದಾರೆ.
ಜು.25 ರವರೆಗೆ ಕಲಬುರಗಿ ಜಿಲ್ಲೆಯಲ್ಲಿ 4,69,029, ಬಳ್ಳಾರಿ 2,26, 272, ಬೀದರ್ 3,17, 221, ಕೊಪ್ಪಳ 2,56,609, ರಾಯಚೂರ 2,66, 154, ವಿಜಯನಗರ 2,38,220, ಯಾದಗಿರಿ 1,68,845 ಜನ ಗ್ರಾಹಕರು ನೋಂದಾಯಿಸಿದ್ದು, 79646 ಅರ್ಜಿ ಪ್ರಗತಿಯಲ್ಲಿವೆ. ಇಲ್ಲಿಯವರೆಗೆ ಒಟ್ಟು 20,21,996 ಜನ ಗ್ರಾಹಕರು ಈ ಯೋಜನೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ.
ಇದೇ ತಿಂಗಳ 5 ರಂದು ನಗರದ ನೂತನ ವಿದ್ಯಾಲಯ ಮೈದಾನ (ಎನ್.ವಿ.ಮೈದಾನ)ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಜ್ಯೋತಿ ಯೋಜನೆಗೆ ಚಾಲನೆ ನೀಡಲಿದ್ದಾರೆ.