ಗೂಳಿ ಸಾವು: ಸಂಪ್ರದಾಯ ಪ್ರಕಾರ ಅಂತ್ಯಕ್ರಿಯೆ

ಚಿತ್ತಾಪುರ: ಜು.9:ತಾಲೂಕಿನ ಕಮರವಾಡಿ ಗ್ರಾಪಂ ವ್ಯಾಪ್ತಿಯ ಆಲೂರು ಗ್ರಾಮದ ಆರಾಧ್ಯ ದೈವ ಶ್ರೀ ಶಿಕರೇಶ್ವರ ದೇವಸ್ಥಾನದ ಗೂಳಿ ಸಾವನ್ನಪ್ಪಿದ್ದು,ಗ್ರಾಮಸ್ಥರು ವಿವಿಧ ಸಂಪ್ರದಾಯ ಆಚರಿಸುವ ಮೂಲಕ ಶನಿವಾರ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

ಸುಮಾರು ವರ್ಷಗಳ ಕಾಲ ಶ್ರೀ ಶಿಕರೇಶ್ವರ ದೇವಸ್ಥಾನದ ಉತ್ಸವಗಳಲ್ಲಿ ಗೂಳಿ ಭಾಗಿಯಾಗುವುದು ವಾಡಿಕೆಯಾಗಿತ್ತು. ಕೆಲವು ಉತ್ಸವಗಳಲ್ಲಿ ದೇವರ ಪ್ರತಿನಿಧಿಯಾಗಿ ಪಟ್ಟದ ಗೂಳಿಯನ್ನು ಬಳಸಿಕೊಳ್ಳಲಾಗಿತ್ತಿತ್ತು. ಗೂಳಿಯ ಸಾವಿನ ಸುದ್ದಿ ತಿಳಿದ ಭಕ್ತರು ಕಂಬನಿ ಮಿಡಿದರು. ಬಳಿಕ ಸಂಪ್ರದಾಯಿಕವಾಗಿ ಗೂಳಿಗೆ ವಿಶೇಷ ಅಲಂಕಾರ ಮಾಡಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಅಂತ್ಯಕ್ರಿಯೆ ನೆರವೇರಿಸಿದ್ದೇವೆ ಎಂದು ಗ್ರಾಮದ ಹಿರಿಯ ಮುಖಂಡ ಬಸವರಾಜಗೌಡ ದೇಶಮುಖ ತಿಳಿಸಿದ್ದಾರೆ.

ಗ್ರಾಮದ ಪ್ರಮುಖರಾದ ಮಲ್ಲಿಕಾರ್ಜುನಗೌಡ ಮಾಲಿ ಪಟೀಲ, ಭೀಮರೆಡ್ಡಿಗೌಡ ಪಾಟೀಲ, ವೈಜನಾಥರೆಡ್ಡಿ ಪಾಟೀಲ, ಆಯಿಲರೆಡ್ಡಿ, ಅನಂತಯ್ಯ ಗುತ್ತೇದಾರ, ಶರಣಪ್ಪ ತಳವಾರ, ಮಾಲಿಕಯ್ಯ ಗುತ್ತೇದಾರ, ಮಾತರ್ಂಡಪ್ಪ ಹೊಸಮನಿ, ಮರೆಪ್ಪ ಗೌಂಡಿ ಸೇರಿದಂತೆ ಅನೇಕರು ಪಾಲ್ಗೋಂಡಿದ್ದರು.