ಗೂನ್ನಳ್ಳಿಯಲ್ಲಿ ಸಂಭ್ರಮದ ದತ್ತ ಜಯಂತಿ ಅಚರಣೆ

ಬೀದರ:ಜ.2: ದತ್ತ ಧಾರ್ಮಿಕ ಕ್ಷೇತ್ರ ಗೂನ್ನಳ್ಳಿಯ ದತ್ತ ಮಂದಿರದಲ್ಲಿ ಡಿಸೆಂಬರ್ 29 ಮತ್ತು 30 ರಂದು ಪ.ಪೂ. ಶ್ರೀ ಶಂಕರದತ್ತ ಮಹಾರಾಜ ಆಶ್ರಮದ ವತಿಯಿಂದ ಸಂಭ್ರಮದ ದತ್ತ ಜಯಂತಿ ಮಹೋತ್ಸವ ಆಚರಣೆ ಮಾಡಲಾಯಿತು. ಜಯಂತಿ ಉತ್ಸವವು ಪೂಜ್ಯ ಶ್ರೀ ಶಂಕರದತ್ತ ಮಹಾರಾಜ ಅವರ ನೇತೃತ್ವದಲಿ ಜರುಗಿತು. ಮಂಗಳವಾರ ಡಿ. 29 ರಂದು ಬೆಳಿಗ್ಗೆ 8 ಗಂಟೆಗೆ ಅಭಿಷೇಕ ಮತ್ತು ಮಹಾಪೂಜೆ, 10 ಗಂಟೆಗೆ ಧ್ವಜಾರೋಹಣ ಹಾಗೂ ಮಧ್ಯಾಹ್ನ 12 ಗಂಟೆಗೆ ಶ್ರೀ ದತ್ತನ ತೊಟ್ಟಿಲು ಕಾರ್ಯಕ್ರಮ ಜರುಗಿದವು. ಮ. 1 ಗಂಟೆಗೆ ಪೂಜ್ಯ ಶ್ರೀ ಶಂಕರದತ್ತ ಮಹಾರಾಜರ ಪಾದಪೂಜೆ ಕಾರ್ಯಕ್ರಮ ಜರುಗಿತು. ಮ.1.30 ರಿಂದ ನಿರಂತರ ಭಜನೆ ಕಾರ್ಯಕ್ರಮ ಜರುಗಿತು.
ಸಂಗೀತ ದರ್ಬಾರ್: ಡಿ. 29 ರಂದು ಸಾಯಂಕಾಲ 6 ರಿಂದ 8ರ ವರೆಗೆ ಶ್ರೀಕೃಷ್ಣ ಸತ್ಸಂಗವಾಣಿ ಸಂಘದ ವತಿಯಿಂದ ಆಗಮಿಸಿದ ಹಿರಿಯ ಸಂಗೀತ ಕಲಾವಿದರಾದ ರಘುನಾಥರಾವ ಪಾಂಚಾಳ ಹಾಗೂ ತಂಡ ರಾ. 8ರಿಂದ9.30ರ ವರೆಗೆ ಶ್ರೀ ಸತ್ಯಸಾಯಿ ಸೇವಾ ಸಮಿತಿ ವತಿಯಿಂದ ಸಂಗೀತ ಕಾರ್ಯಕ್ರಮ ಜರುಗಿತು. ರಾ. 9.45 ಕ್ಕೆ ದೀಪೋತ್ಸವ ಕಾರ್ಯಕ್ರಮ ಜರುಗಿತು. ರಾತ್ರಿ 10 ರಿಂದ ರಾತ್ರಿಯಿಡೀ ಶ್ರೀ ಮಹೇಶಕುಮಾರ ಮಾಹಿ ಇವರ ನೇತೃತ್ವದಲ್ಲಿ ಸಾರೆಗಮಪ ತಂಡದ ವತಿಯಿಂದ ನಿರಂತರ ಸಂಗೀತ ದರ್ಬಾರ್ ಜರುಗಿತು. ಹಿರಿಯ ಕಲಾವಿದರಾದ ಪುಂಡಲಿಕರಾವ ಪಾಟೀಲ ಗುಮ್ಮಾ, ರಾಮ ಧುರ್ವೆ, ಶಿವಕುಮಾರ ಪಾಂಚಾಳ, ಬಲರಾಮ ಪಾಂಚಾಳ, ಅರವಿಂದ ಶೀಲವಂತ, ಅಂಬರೀಶ ಶೀಲವಂತ, ಮಲ್ಲಿಕಾರ್ಜುನ ನಾಗಮಾರಪಳ್ಳಿ, ಜೆಸ್ಸಿ ಸೋನವಾನೆ, ಚನ್ನಬಸಪ್ಪ, ಕು.ಪವಿತ್ರಾ ಸೇರಿದಂತೆ ಅನೇಕರು ಸಂಗೀತ ದರ್ಬಾರ್ ನಡೆಸಿಕೊಟ್ಟರು.
ಡಿಸೆಂಬರ್ 30 ರಂದು ಬೆಳಿಗ್ಗೆ 6 ಗಂಟೆಗೆ ದತ್ತನ ಮಹಾ ಆರತಿ ಕಾರ್ಯಕ್ರಮ ಜರುಗಿತು. ನಂತರ ಮು: 8 ಗಂಟೆಯಿಂದ ಶ್ರೀ ದತ್ತನ ಪಲ್ಲಕ್ಕಿ ಉತ್ಸವ ಜರುಗಿತು ಎಂದು ಟ್ರಸ್ಟ್‍ನ ಅಧ್ಯಕ್ಷರಾದ ಗೋರಕನಾಥ ಕುಂಬಾರ ಹಾಗೂ ಕಾರ್ಯದರ್ಶಿ ಮಹೇಶಕುಮಾರ ಕುಂಬಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎರಡು ದಿವಸಗಳ ಕಾಲ ನಡೆದ ಸಂಭ್ರಮದ ದತ್ತ ಜಯಂತಿ ಉತ್ಸವದಲ್ಲಿ ಶ್ರೀನಿವಾಸ ಕುಂಬಾರ, ಹಣಮಂತ ವಾಡಿ, ನಾಗೇಶ ಸಪಾಟೆ, ದಿಗಂಬರ್ ಕುಂಬಾರ, ಆನಂದ ಶೀಲವಂತ, ಲಕ್ಷ್ಮೀನಾರಾಯಣ ಚಾರಿ, ನಾರಾಯಣ ಕುಂಬಾರ, ರಮೇಶ ಮಡಿವಾಳ, ಕಲ್ವಾ ಶ್ರೀನಿವಾಸ, ನಾರಾಯಣ ಬುದೇರಾ, ವೇಣುಗೋಪಾಲ ಶೀಲವಂತ, ರವಿಕುಮಾರ ಕುಂಬಾರ, ವಿದ್ಯಾಸಾಗರ ಪೂಜಾರಿ, ಅಶೋಕ ಮಡಿವಾಳ, ಪಾಂಡುರಂಗ ಕುಂಬಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.