ಗೂಡ್ಸ್​ ವಾಹನ ಬೈಕ್ ಗೆ ಡಿಕ್ಕಿ ತಾಯಿ-ಮಗ ಸಾವು

ಹಾವೇರಿ,ಜು.27-ವೇಗವಾಗಿ ಬಂದ ಬೊಲೆರೋ ಗೂಡ್ಸ್​ ವಾಹನ ಡಿಕ್ಕಿ‌ ಹೊಡೆದು ಬೈಕ್‌ನಲ್ಲಿ ಹೋಗುತ್ತಿದ್ದ ತಾಯಿ-ಮಗ ಸ್ಥಳದಲ್ಲಿ ಸಾವಿಗೀಡಾದ ಘಟನೆ ಹಾನಗಲ್ ತಾಲೂಕಿನ ವರ್ದಿ ಕ್ರಾಸ್‌ನಲ್ಲಿ ನಡೆದಿದೆ.
ಹರವಿ ಗ್ರಾಮದ ಮಲವ್ವ ದೇವಗಿರಿ (60) ಹಾಗೂ ಅವರ ಪುತ್ರ ರುದ್ರಪ್ಪ ದೇವಗಿರಿ (35) ಮೃತಪಟ್ಟವರು.
ಮೃತ ಹಾವೇರಿಯಿಂದ ಹರವಿ ಗ್ರಾಮಕ್ಕೆ ತಾಯಿ ಮಗ ಹೊರಟಿದ್ದರು. ಈ ಸಂದರ್ಭದಲ್ಲಿ ಹಾನಗಲ್ ಕಡೆಯಿಂದ ಬರುತ್ತಿದ್ದ ಬೊಲೆರೋ ಗೂಡ್ಸ್ ವಾಹನ ಡಿಕ್ಕಿಯಾಗಿದ್ದರಿಂದ ಈ ದುರ್ಘಟನೆ ನಡೆದಿದೆ.
ಸುದ್ದಿ ತಿಳಿದ ತಕ್ಷಣವೇ ಆಡೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.