ಗೂಡ್ಸ್ ಪಲ್ಟಿ: ಓರ್ವ ಮಹಿಳೆ ಸಾವು

ವಿಜಯಪುರ.ಜೂ 5: ಚಾಲಕನ ನಿಯಂತ್ರಣ ತಪ್ಪಿ ಗೂಡ್ಸ್ ವಾಹನ ಪಲ್ಟಿಯಾಗಿ ಓರ್ವ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬರಟಗಿ ಕ್ರಾಸ್ ಬಳಿ ನಡೆದಿದೆ.
ಹಾಸೀಮಬಿ ಹಕೀಮ 32 ಮೃತಪಟ್ಟಿರುವ ದುರ್ದೈವಿ.
ಗೂಡ್ಸ್‍ನಲ್ಲಿದ್ದ ರೋಹಿತ ಹಾಗೂ ಆಸ್ಮಾಬಿ ಎಂಬುವವರಿಗೆ ಗಾಯಗಳಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.ಸ್ಥಳಕ್ಕೆ ಪೆÇಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಿಜಯಪುರ ಗ್ರಾಮೀಣ ಪೆÇಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.