ಗೂಡ್ಸ್-ಎತ್ತಿನ ಗಾಡಿ ಡಿಕ್ಕಿ:70 ಸಾವಿರ ಮೌಲ್ಯದ ಮದ್ಯ ಹಾನಿ

ವಿಜಯಪುರ ನ 12 : ವಿಜಯಪುರ
ಕಡೆಯಿಂದ ಕೊಲ್ಹಾರ ಕ್ಕೆ ಮದ್ಯ ಸಾಗಿಸುತ್ತಿರುವ ಗೂಡ್ಸ್ ಆಟೋ ಹಾಗೂ ಎತ್ತಿನ ಗಾಡಿ ಡಿಕ್ಕಿಯಾಗಿ ಸುಮಾರು 70 ಸಾವಿರ ಮೌಲ್ಯದ ಮದ್ಯ ಹಾನಿಯಾಗಿರುವ ಘಟನೆ ಕೊಲ್ಹಾರ ತಾಲೂಕಿನ ಮುಳವಾಡ ಕ್ರಾಸ್ ಹತ್ತಿರ( ಬಂಗ್ಲಿ) 218 ರ ಹೆದ್ದಾರಿಯಲ್ಲಿ ನಡೆದಿದೆ.
ಮುಳವಾಡದ ಗ್ರಾಮದ ಶ್ರೀಶೈಲ ಕಳಸಗೊಂಡು ತನ್ನ ಜಮೀನಿ ನಿಂದ ಎತ್ತಿನ ಗಾಡಿಯಲ್ಲಿ ಮನೆಗೆ ತೆರಳುತ್ತಿದ್ದ ವೇಳೆ, ವಿಜಯಪುರದಿಂದ ಕೊಲ್ಹಾರ ದ ಬಾರ್‍ವೊಂದಕ್ಕೆ ಮದ್ಯ ಸಾಗಣೆ ಮಾಡುತ್ತಿದ್ದ ಗೂಡ್ಸ್ ಆಟೋ ಹಿಂದಿನಿಂದ ಡಿಕ್ಕಿಯಾಗಿದ್ದು, 2.15 ಲಕ್ಷ ರೂ. ಮೌಲ್ಯದ ಮದ್ಯದಲ್ಲಿ ಸುಮಾರು 70 ಸಾವಿರ ಮದ್ಯ ಹಾನಿಯಾಗಿದೆ.ಮನಗೂಳಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.