ಗೂಡ್ಸ್‌ ಟೆಂಪೋಗೆ ಈಚರ್‌ ಲಾರಿ ಡಿಕ್ಕಿ: ಸವಾರ ಮೃತ್ಯು

ಉಪ್ಪಿನಂಗಡಿ, ಎ.೬- ಶಿರಾಡಿ ಗ್ರಾಮದ ಪರವರಕೊಟ್ಯ ಎಂಬಲ್ಲಿ ಎರಡು ವಾಹನಗಳ ನಡುವೆ ಢಿಕ್ಕಿ ಸಂಭವಿಸಿ ಚಾಲಕನೋರ್ವ ಮೃತಪಟ್ಟ ಘಟನೆ ಸೋಮವಾರ ಸಂಭವಿಸಿದೆ.

ಪಾಣೆಮಂಗಳೂರಿನಿಂದ ಹಾಸನಕ್ಕೆ ಬೀಡಿ ಸಾಗಾಟ ಮಾಡುತ್ತಿದ್ದ ಮಿನಿ ಗೂಡ್ಸ್ ಟೆಂಪೊಗೆ ಎದುರಿನಿಂದ ಬಂದ ಈಚರ್ ಲಾರಿ ಢಿಕ್ಕಿ ಹೊಡೆದಿದ್ದು, ಬೀಡಿ ಸಾಗಾಟ ವಾಹನದ ಚಾಲಕ ಹನೀಫ್ (56) ಎಂಬವರು ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರೆನ್ನಲಾಗಿದೆ. ಘಟನೆಯಿಂದ ರಫೀಕ್ ಮತ್ತು ಕರೀಮ್ ಎಂಬವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ಹನೀಫ್ ಮಾಣಿ ಸಮೀಪದ ಕುಕ್ಕಾಜೆ ನಿವಾಸಿಯಾಗಿದ್ದು, ಪತ್ನಿ, ಮೂವರು ಪುತ್ರಿಯರು, ಇಬ್ಬರು ಪುತ್ರರನ್ನು ಅಗಲಿದ್ದಾರೆ. ಈ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.