ಗೂಡಂಗಡಿಗಳ ತೆರವು ನಿಲ್ಲಿಸಲು ಮನವಿ

ಜಗಳೂರು.ನ.೩; ರಸ್ತೆ ಬದಿಯ ವ್ಯಾಪಾರಿಗಳ ಅಂಗಡಿಗಳನ್ನು ಕೂಡಲೇ ತೆರವುಗೊಳಿಸುವುದನ್ನು ನಿಲ್ಲಿಸ ಬೇಕೆಂದು ಒತ್ತಾಯಿಸಿ ತಾಲೂಕು ಪ್ರಗತಿಪರ ಸಂಘಟನಾಕಾರರು ತಹಶೀಲ್ದಾರ್ ಡಾ. ನಾಗವೇಣಿ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು. ಜಗಳೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಪ್ರಮುಖ ರಸ್ತೆಗಳಲ್ಲಿ ಜೀವನೋಪಾಯಕ್ಕಾಗಿ ಬಡ ಕೂಲಿ ಕಾರ್ಮಿಕರು ವಿವಿಧ ವ್ಯಾಪಾರ ವಹಿವಾಟು ನಡೆಸುತ್ತಿದ್ದು ಈ ಅಂಗಡಿಗಳನ್ನು ತೆರವುಗೊಳಿಸುವುದು ಬಡ ಕೂಲಿಕಾರ್ಮಿಕರ ಹೊಟ್ಟೆಯ ಮೇಲೆ ಬರೆ ಎಳೆದಂತಾಗಿದೆ ಈಗಾಗಲೇ ಕರ್ನಾಟಕ ರಾಜ್ಯದಲ್ಲಿ ಕೋವಿಡ್ -೧೯ ಬಂದು ಲಾಕ್ಡೌನ್ ಆಗಿರುವುದರಿಂದ ಜನರು ಜೀವನ ನಡೆಸುವುದೇ ಕಷ್ಟಕರ ಇಂತಹ ಸಮಯದಲ್ಲಿ ಬಡ ನಿರ್ಗತಿಕರ ಬದುಕನ್ನು ಕಿತ್ತುಕೊಳ್ಳುವ ಕೆಲಸ ತಾಲೂಕು ಆಡಳಿತ ಮಾಡುತ್ತಿದೆ. ಈ ಕೂಡಲೇ ತೆರವುಗೊಳಿಸುವ ಕೆಲಸವನ್ನು ತಾತ್ಕಾಲಿಕವಾಗಿ ನಿಲ್ಲಿಸಿ ಕೂಲಿ ಕಾರ್ಮಿಕರು ಬೀದಿಬದಿ ವ್ಯಾಪಾರಿಗಳು ಬೇರೆ ಬದುಕನ್ನು ಕಟ್ಟಿಕೊಳ್ಳುವವರೆಗೂ ಸಮಯಾವಕಾಶವನ್ನು ನೀಡಬೇಕೆಂದು ಪ್ರಗತಿಪರ ಸಂಘಟನೆಕಾರರಾದ ಮಹಾಲಿಂಗಪ್ಪ, ಸತೀಶ್ ಎಲ್ಲಾ ಗೂಡಂಗಡಿಗಳ ಮಾಲೀಕರು ತಾಲೂಕು ದಂಡಾಧಿಕಾರಿಗಳಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.