ಗೂಡಂಗಡಿಗಳ ತೆರವಿಗೆ ಬೆಳ್ಳಂಬೆಳಿಗ್ಗೆ ಜೆಸಿಬಿ ಸದ್ದು

ಅಫಜಲಪುರ:ಆ.12: ಪಟ್ಟಣದಲ್ಲಿ ಹೆಚ್ಚುತ್ತಿರುವ ಜನಸಂದಣಿ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ರಸ್ತೆ ಅಗಲೀಕರಣ ಕಾರ್ಯಕ್ಕೆ ಮುಂದಾಗಿದ್ದು ಶನಿವಾರ ಮುಂಜಾನೆ ಬೆಳ್ಳಂ ಬೆಳಿಗ್ಗೆ ಜೆಸಿಬಿ ಸದ್ದು ಮಾಡಿದೆ.

ಇಂದು ಮುಂಜಾನೆ ಜೆಸಿಬಿ ವಾಹನಗಳು ಕಾರ್ಯಾಚರಣೆಗೆ ಮುಂದಾಗಿದ್ದೇ ತಡ ಗೂಡಂಗಡಿಗಳ ಮಾಲೀಕರು ತಮ್ಮ ತಮ್ಮ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಲು ಹರಸಾಹಸ ಪಡುವಂತಾಯಿತು.

ಹೆದ್ದಾರಿ ಅಕ್ಕ ಪಕ್ಕದಲ್ಲಿ ಅನಧಿಕೃತವಾಗಿ ಹಾಕಲಾಗಿದ್ದ ಗೂಡಂಗಡಿಗಳನ್ನು ಪಟ್ಟಣದ
ನಾಕೇದಾರ ಪೆಟ್ರೋಲ್ ಪಂಪಿನಿಂದ ತಹಸೀಲ್ ಕಚೇರಿಯವರೆಗೆ ಅಗಲೀಕರಣ ಕಾರ್ಯ ಆರಂಭಗೊಂಡಿದೆ.

ಈಗಾಗಲೇ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಹಲವು ಬಾರಿ ಸಂಬಂಧಪಟ್ಟವರಿಗೆ ಗೂಡಂಗಡಿಗಳ ತೆರವಿಗೆ ಸೂಚನೆ ನೀಡಲಾಗಿದ್ದರೂ ಕೂಡ ಎಚ್ಚೆತ್ತುಕೊಳ್ಳದ ಗೂಡಂಗಡಿಗಳ ಮಾಲೀಕರು ಜೆಸಿಬಿಗಳು ಬಂದು ನಿಂತದ್ದೇ ತಡ ತಮ್ಮ ತಮ್ಮ ಅಂಗಡಿಗಳನ್ನು ತೆರವುಗೊಳಿಸಲು ಹರಸಾಹಸ ಪಡಬೇಕಾಯಿತು.

ಕಾರ್ಯಾಚರಣೆಯಲ್ಲಿ ತಹಸೀಲ್ದಾರ ಸಂಜೀವಕುಮಾರ ದಾಸರ್,
ಪುರಸಭೆ ಮುಖ್ಯಾಧಿಕಾರಿ
ವಿಜಯ್‍ಮಹಾಂತೇಶ, ಸಿಪಿಐ ಪಂಡಿತ ಸಗರ್, ಲೋಕೋಪಯೋಗಿ ಅಧಿಕಾರಿ ಉಮೇಶ ಆಲೇಗಾಂವ, ಪಿ.ಎಸ್.ಐ ಗಳಾದ ಮಡಿವಾಳಪ್ಪ ಬಾಗೋಡಿ, ರಾಹುಲ್ ಪವಾಡೆ, ಸವಿತಾ ಕಲ್ಲೂರ ಸೇರಿದಂತೆ ಪುರಸಭೆಯ ಸಿಬ್ಬಂದಿ ಹಾಗೂ ಪೆÇಲೀಸ್ ಭದ್ರತಾ ಪಡೆ ಹಾಜರಿದ್ದು ಕಾರ್ಯಾಚರಣೆ ನಾಳೆ ಮುಕ್ತಾಯಗೊಳ್ಳಲಿದೆ. ಸೋಮವಾರದಿಂದ ರಸ್ತೆ ನಿರ್ಮಾಣ ಕಾರ್ಯ ಆರಂಭಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.