ಗೂಗಲ್ ಬುಕ್ಸ್ ಆಟ್ರ್ಸ & ಕಲ್ಚರ್ ಆರ್ಟಗೆ ಹಿರಿಯ ಚಿತ್ರಕಲಾವಿದ ಡಾ. ಸುಬ್ಬಯ್ಯಾ ಎಂ. ನೀಲಾ ಕಲಾಕೃತಿ ಆಯ್ಕೆ

ಕಲಬುರಗಿ,ಮಾ.23:ಹಿರಿಯ ಚಿತ್ರಕಲಾವಿದ ಡಾ. ಸುಬ್ಬಯ್ಯಾ ಎಂ. ನೀಲಾ ಇವರು ಪ್ರೊಜೆಕ್ಟ್ ಸಿ.ಬಿ.ಎ ಮತ್ತು ಸಿ. ಗೂಗಲ್ ಬುಕ್ಸ ಆಟ್ರ್ಸ & ಕಲ್ಚರ್ ಆರ್ಟ ಎಕ್ಷಿಬಿಟ್ ಜಗತ್ತಿನ ಶ್ರೇಷ್ಟ ಹೆಸರುವಾಸಿಯಾದಂತಹ ಗೂಗಲ್ ಇವರು ಚಿತ್ರಕಲೆಗೆ ಹೆಚ್ಚಿನ ಮಹತ್ವ ಕೊಟ್ಟು ಕಲಾವಿದರಿಗೆ ವಿವಿಧ ರೀತಿಯ ಕಲಾಕೃತಿಗಳನ್ನು ಆಯ್ಕೆ ಮಾಡಿ ಅವರ ಹೆಸರುಗಳನ್ನು ವಿವಿಧ ರೀತಿಯ ಕಲಾಕೃತಿಗಳನ್ನು ಜಗತ್ತಿಗೆ ಪರಿಚಯ ಮಾಡುವ ಕೆಲಸವನ್ನು ಗೂಗಲಿನ ಗ್ರೂಪಿನವರು ಕೆಲಸ ಮಾಡುತ್ತಿದ್ದಾರೆ. ಈ ಪ್ರದರ್ಶನದಲ್ಲಿ ರಾಜ್ಯ, ರಾಷ್ಟ್ರ ಹಾಗು ಅಂತರರಾಷ್ಟ್ರೀಯ ಮಟ್ಟದಲ್ಲಿ ಒಳ್ಳೆಯ ಕಲಾಕೃತಿ ಹಾಗು ಕಲಾವಿದರನ್ನು ನೋಡಲು ಹಾಗು ಸಮಕಾಲಿನ ಅಂದರೆ ಇಂದಿನ ಬೆಳೆಯುವ ಕಲಾವಿದರಿಗೆ ಪ್ರೇರಣೆಯಾಗಿ ಗೂಗಲ್ ಬುಕ್ಸ್‍ನವರು ಮಾಡುತ್ತಿದ್ದಾರೆ.
ನಾನು ಕಲ್ಯಾಣ ಕರ್ನಾಟಕದ ಕಲಬುರಗಿಯ ಶರಣಬಸವ ವಿಶ್ವವಿದ್ಯಾಲಯದ ಸ್ನಾತ್ತಕೋತ್ತರ ದೃಶ್ಯ ಕಲಾ ವಿಭಾಗದ ಪ್ರಾದ್ಯಾಪಕನಾಗಿ ಹಾಗು ಮುಖ್ಯಸ್ಥನಾಗಿ ಕೆಲಸ ಮಾಡುತ್ತಿದ್ದು, ಬೇರೆ ಬೇರೆ ಕಡೆಯ ಕಲಾ ಚಟುವಟಿಕೆಗಳಲ್ಲಿ ನನ್ನ ಒಟ್ಟು 10 ಕಲಾಕೃತಿಗಳನ್ನು ಆಯ್ಕೆ ಮಾಡಿ ಪ್ರದರ್ಶನ ಮಾಡಿರುತ್ತಾರೆ. ಗೂಗಲ್ ಬುಕ್ಸ್ ಹೊದಿಕೆಯ ಮೇಲೆ ಒಟ್ಟು 4 ಕಲಾಕೃತಿಗಳು ಇರುತ್ತವೆ. ಇದರ ವಿವರಗಳು ಕೆಳಗಿನಂತಿವೆ.

  1. ಸುಂದರವಾದ ರೇಖೆ ಹಾಗು ಅಲಂಕಾರಿಕ ಮಹಿಳೆಯ ಚಿತ್ರ
  2. ಪಿ.ಎಸ್.ಐ ಭಂಡೆಯವರನ್ನು ಶೂಟ್ ಔಟ್ ಮಾಡಿದ ನವ್ಯ ಚಿತ್ರಕಲೆ.
  3. ಶರಣಬಸವೇಶ್ವರ ದಂಪತಿಗಳು ಬೆಳಗಿನ ಜಾವ ತಮ್ಮ ಹೊಲಕ್ಕೆ ಕಾಯಕ ದಾಸೋಹ ಮಾಡುತ್ತಿರುವ ಕಲಾಕೃತಿ.
  4. ಸೇವ ದಿ ಲೈಫ್ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದ ಕಾರಣ ತಮ್ಮನ್ನು ತಾವೇ ರಕ್ಷಣೆ ಮಾಡಿಕೊಳ್ಳುವ ನವ್ಯ ಕಲಾಕೃತಿ ಇದಾಗಿರುತ್ತದೆ.
    ಇನ್ನೂ ಗೂಗಲ್ ಬುಕ್ಕಿನ ಒಳಗಡೆ ವಿವಿದ ರೀತಿಯ ಅಂದರೆ ಆಧೈತ್ಮಿಕ, ಧಾರ್ಮಿಕ, ಸಾಂಸ್ಕøತಿಕ ಕಲ್ಯಾಣ ಕರ್ನಾಟಕದ ಜನಪದ ಚಿತ್ತಗಳ ನೋಡಲು ಸಿಗುತ್ತವೆ. ಇದಕ್ಕೆಲ್ಲಾ ಪರಮ ಪೂಜ್ಯ ಡಾ. ಶರಣಬಸವಪ್ಪಾ ಅಪ್ಪಾ ಅವರು ಹಾಗು ಮಾತೋಶ್ರೀ ಡಾ. ದಾಕ್ಷಾಯಿಣಿ ಎಸ್. ಅಪ್ಪಾ ತಾಯಿಯವರು ಮತ್ತು ಬಸವರಾಜ ದೇಶಮುಖ ಅವರ ಸಹಕಾರದಿಂದ ನಮ್ಮ ಶರಣಬಸವೇಶ್ವರ ಸಂಸ್ಥಾನಕ್ಕೆ ಹಾಗು ಶರಣಬಸವೇಶ್ವರ ವಿಶ್ವವಿದ್ಯಾಲಯಕ್ಕೆ ಕೀರ್ತಿ ತಂದಿರುತ್ತೇನೆ ಇದೇ ರೀತಿ ನನ್ನ ಮೇಲೆ ಶರಣರ ಆಶೀವಾರ್ದ ಇರುವುದರಿಂದ ಎತ್ತರ ಮಟ್ಟಕ್ಕೆ ಬೆಳೆಯುತ್ತಿದ್ದೇನೆ ಮತ್ತು ನನ್ನನ್ನು ಆಯ್ಕೆ ಮಾಡಿದ ಗೂಗಲ್ ಬುಕ್ಸ್ ಆಟ್ರ್ಸ & ಕಲ್ಚರ್‍ನವರು ನನ್ನನ್ನು ಇಡೀ ಜಗತ್ತಿಗೆ ಚಿತ್ರಕಲಾವಿದನೆಂದು ಬಿಂಬಿಸಿ ಪರಿಚಯ ಮಾಡಿಕೊಟ್ಟಿದ್ದಾರೆ.