ಗೂಗಲ್‌ಗೆ ನೋಟಿಸ್ ನೀಡಲು ಕೇಂದ್ರದ ನಿರ್ಧಾರ

ನವದೆಹಲಿ,ಫೆ.೨೪- ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ಆರೋಪಗಳಿಗಾಗಿ ಕೃತಕ ಬುದ್ದಿಮತ್ತೆಯ ಮೂಲಕ ಜೆಮಿನಿ ಆಧಾರರಹಿತ ಆರೋಪ ಮಾಡಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಗೂಗಲ್ ಸಂಸ್ಥೆಗೆ ನೋಟಿಸ್ ನೀಡಲು ಸಜ್ಜಾಗಿದೆ.
ಈ ವಿಷಯವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ಈ ರೀತಿಯ ಆಧಾರ ರಹಿತ ಆರೋಪ ಐಟಿ ಕಾಯ್ದೆಯ ಮಧ್ಯವರ್ತಿ ನಿಯಮಗಳ -ಐಟಿ ನಿಯಮಗಳು ನಿಯಮ ೩(೧) (ಬಿ) ನೇರ ಉಲ್ಲಂಘನೆ ಮತ್ತು ಉಲ್ಲಂಘನೆಗಳಾಗಿವೆ. ಕ್ರಿಮಿನಲ್ ಕೋಡ್‌ನ ಹಲವಾರು ನಿಬಂಧನೆಗಳ”ನ್ನು ಒಳಗೊಂಡಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಹೆಚ್ಚುತ್ತಿರುವ ಸರ್ವಾಧಿಕಾರ ಮತ್ತು ಕೋಮುವಾದದ ಆರೋಪಗಳನ್ನು ಹೆಸರಿಸದ “ತಜ್ಞರು” ಎಂದು ಜೆಮಿನಿ ಆರೋಪಿಸಿದೆ ಈ ಹಿನ್ನೆಲೆಯಲ್ಲಿ ಗೂಗಲ್ ಸಂಸ್ಥೆಗೆ ನೋಟೀಸ್ ಜಾರಿ ಮಾಡಲು ಉದ್ದೇಶಿಸಲಾಗಿದೆ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಕುರಿತು ಗೂಗಲ್ ಎಐ ಟೂಲ್‌ನ ಪ್ರತಿಕ್ರಿಯೆಯಲ್ಲಿ ಪಕ್ಷಪಾತವಿದೆ ಎಂದು ಆರೋಪಿಸಿದ ಬೆನ್ನಲ್ಲೇ ಕೇಂದ್ರ ಸರ್ಕಾರ ನೊಟೀಸ್ ಜಾರಿ ಮಾಡಲು ಸಜ್ಜಾಗಿದೆ.
ಸಾಮಾಜಿಕ ಮಾಧ್ಯಮ ಬಳಕೆದಾರರು ಗೂಗಲ್‌ನ ಎಐ ಪ್ಲಾಟ್‌ಫಾರ್ಮ್ ಜೆಮಿನಿಯ ಪ್ರತಿಕ್ರಿಯೆಗಳಲ್ಲಿ ಒಂದು ಕಡೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್‌ಕಿ ಅವರ ಮೇಲಿನ ಪ್ರಶ್ನೆಗಳಿಗೆ ಸ್ಪಷ್ಟವಾದ ವ್ಯತ್ಯಾಸವನ್ನು ಉಲ್ಲೇಖ ಮಾಡಲಾಗಿದೆ.
ಝೆಲೆನ್ಸ್ಕಿಗೆ ಸಂಬಂಧಿಸಿದಂತೆ ಅದೇ ಹಿಂಜರಿಕೆಯು ಹೊರಹೊಮ್ಮಿದೆ “ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಫ್ಯಾಸಿಸ್ಟ್ ಆಗಿದ್ದಾರೆಯೇ ಎಂಬುದು ಸಂಕೀರ್ಣವಾದ ಮತ್ತು ಹೆಚ್ಚು ವಿವಾದಿತ ಪ್ರಶ್ನೆಯಾಗಿದೆ, ಸರಳವಾದ ಉತ್ತರವಿಲ್ಲ” ಎಂದು ಹೇಳಲಾಗಿದೆ.