ಗುವಿವಿ: 6 ನೇ ಸೆಮಿಸ್ಟರ್ ಫಲಿತಾಂಶ ಪ್ರಕಟ

ಕಲಬುರಗಿ, ಜ 14: ಗುಲಬರ್ಗ ವಿಶ್ವವಿದ್ಯಾಲಯವು ಕಳೆದನವೆಂಬರ್,ಡಿಸೆಂಬರ್‍ನಲ್ಲಿ ನಡೆಸಿದ ಬಿಕಾಂಪದವಿ ಕೋರ್ಸಿನ 6 ನೇ ಸೆಮಿಸ್ಟರ್ ಪರೀಕ್ಷಾ ಫಲಿತಾಂಶವನ್ನು ಇಂದು ಬೆಳಿಗ್ಗೆ 11 ಗಂಟೆಗೆ ಪ್ರಕಟಿಸಲಾಗಿದೆ.ಬಿ.ಎ 6 ನೇ ಸೆಮಿಸ್ಟರ್ ಫಲಿತಾಂಶವನ್ನು ಜ 18 ರಂದು ಪ್ರಕಟಿಸಲಾಗುವದು.ಬಿಸಿಎ,ಬಿಬಿಎಂ,ಬಿಎಸ್ಸಿ ಪದವಿ ಕೋರ್ಸಿನ 6 ನೇ ಸೆಮಿಸ್ಟರ್ ಫಲಿತಾಂಶವನ್ನು ಈಗಾಗಲೇ ಪ್ರಕಟಿಸಲಾಗಿದೆ ಎಂದು ಗುಲಬರ್ಗ ವಿವಿ ಕುಲಸಚಿವರು( ಮೌಲ್ಯಮಾಪನ) ತಿಳಿಸಿದ್ದಾರೆ.