ಗುವಿವಿ: ಮೊದಲ ದಿನದ ಪ್ರವೇಶ ಪರೀಕ್ಷೆ ಮುಕ್ತಾಯ

ಕಲಬುರಗಿ :ಅ.19: ಗುಲಬರ್ಗಾ ವಿಶ್ವವಿದ್ಯಾಲಯದ 2023ನೇ ಸಾಲಿನ ಎಂ.ಫಿಲ್ ಮತ್ತು ಪಿಹೆಚ್.ಡಿ ಪ್ರವೇಶ ಪರೀಕ್ಷೆ ನಿಗದಿಯಂತೆ ಇಂದು ಬೆ. 11 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಜರುಗಿತು.
ಮುಖ್ಯ ಆವರಣದಲ್ಲಿರುವ ವಿಜ್ಞಾನ ಕಟ್ಟಡದ ವಿವಿಧ ವಿಭಾಗಗಳ ಸುಮಾರು 24 ಬ್ಲಾಕ್‍ಗಳಲ್ಲಿ ಎಂಟು ವಿಷಯಗಳಿಗೆ ಪರೀಕ್ಷೆ ಪ್ರವೇಶಕ್ಕೆ ಅರ್ಜಿ ಸಲ್ಲಿಸದ ಸುಮಾರು 574 ಅಭ್ಯರ್ಥಿಗಳಲ್ಲಿ 430 (ಶೇಕಡವಾರು 74.91 ರಷ್ಟು) ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಮೊದಲ ದಿನದ ಪರೀಕ್ಷೆ ಸುಸೂತ್ರವಾಗಿ ನಡೆಯಿತು.
ಕುಲಪತಿ ಪೆÇ್ರ. ದಯಾನಂದ ಅಗಸರ ಪರೀಕ್ಷೆ ಕೇಂದ್ರಗಳಿಗೆ ಇಂದು ಭೇಟಿ ನೀಡಿ ವೀಕ್ಷಣೆ ಮಾಡಿದರು. ಪರೀಕ್ಷಾ ಕೇಂದ್ರಗಳಲ್ಲಿನ ಸಿದ್ದತೆ ಮತ್ತು ಸುವ್ಯವಸ್ಥೆಗಳ ಬಗ್ಗೆ ಸಮಿತಿ ಸದಸ್ಯರೊಂದಿಗೆ ಚರ್ಚಿಸಿ ಅಭ್ಯರ್ಥಿಗಳಿಗೆ ಯಾವುದೇ ತೊಂದರೆ ಉಂಟಾಗದಂತೆ ಎಚ್ಚರ ವಹಿಬೇಕೆಂದು ಸಲಹೆ ನೀಡಿದರು. ಅಭ್ಯರ್ಥಿಗಳು ಯಾವುದೇ ಗೊಂದಲವಿಲ್ಲದೆ ಪರೀಕ್ಷೆ ಬರೆದರು.
ಈ ಸಂದರ್ಭದಲ್ಲಿ ಮೌಲ್ಯಮಾಪನ ಕುಲಸಚಿವ ಪೆÇ್ರ. ಜ್ಯೋತಿ ಧಮ್ಮ ಪ್ರಕಾಶ್, ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದ ಡೀನ್ ಪ್ರೊ. ಕೆ. ಲಿಂಗಪ್ಪ, ಸಮಾಜ ವಿಜ್ಞಾನ ನಿಕಾಯದ ಡೀನ್ ಪೆÇ್ರ. ಶ್ರೀರಾಮುಲು, ಕಲಾ ನಿಕಾಯದ ಡೀನ್ ಪೆÇ್ರ. ರಮೇಶ್ ರಾಠೋಡ್, ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪೆÇ್ರ. ಚಂದ್ರಕಾಂತ್ ಎಂ. ಯಾತನೂರ್, ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪೆÇ್ರ. ಬಿ. ಎಂ. ನಡುವಿನಮನಿ, ಹಿಂದಿ ವಿಭಾಗದ ಮುಖ್ಯಸ್ಥೆ ಪೆÇ್ರ. ಪರಿಮಳ ಅಂಬೇಕರ್, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಪೆÇ್ರ. ಎಂ ಜಿ. ಕಣ್ಣೂರು ಮತ್ತಿತರರಿದ್ದರು.