ಗುವಿವಿ: ಪಿಎಂ-ಉಷಾ ಅನುದಾನ ಶೈಕ್ಷಣಿಕ ಚಟುವಟಿಕೆಗೆ ಸಹಕಾರಿ : ಪ್ರೊ. ದಯಾನಂದ ಅಗಸರ

ಕಲಬುರಗಿ:ಫೆ.20: ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯ “ಪ್ರಧಾನ ಮಂತ್ರಿ ಉಚ್ಚತರ ಶಿಕ್ಷಾ ಅಭಿಯಾನ” (ಪ್ರಧಾನ ಮಂತ್ರಿ-ಉಷಾ) ದಡಿಯಲ್ಲಿ 20 ಕೋಟಿ ಅನುದಾನ ದೊರೆತಿರುವುದು ಗುಲಬರ್ಗಾ ವಿಶ್ವವಿದ್ಯಾಲಯದ ವಿಶ್ವದರ್ಜೆಯ ಗುಣಮಟ್ಟದ ಶೈಕ್ಷಣಿಕ ಚಟುವಟಿಕೆ ಹಾಗೂ ಉತ್ಕøಷ್ಠ ಸಂಶೊಧನೆ ಕಾರ್ಯಕ್ರಮಗಳನ್ನು ಕೈಗೊಳ್ಳಲು ಸಹಕಾರಿಯಾಗಿದೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ ಹೇಳಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರು ಫೆ.20 ರಂದು 2024 ರಂದು ಮುಂಜಾನೆ 11.00 ಗಂಟೆಗೆ ವೀಡಿಯೊ ಕಾನ್ಫರೆನ್ಸ್ ಮೂಲಕ “ಪ್ರಧಾನ ಮಂತ್ರಿ ಉಚ್ಚತರ ಶಿಕ್ಷಾ ಅಭಿಯಾನ (ಪ್ರಧಾನ ಮಂತ್ರಿ-ಉಷಾ) ಯೋಜನೆಯನ್ನು ಉದ್ಘಾಟಿಸುವ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಣೆಗಾಗಿ ಗುಲಬರ್ಗಾ ವಿಶ್ವವಿದ್ಯಾಲಯದ ಮಹಾತ್ಮಗಾಂಧಿ ಸಭಾಂಗಣದಲ್ಲಿ ಆಯೋಜಿಸಿದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ದೇಶದ ವಿಶ್ವವಿದ್ಯಾಲಯಗಳನ್ನು ಜಾಗತಿಕ ಮಟ್ಟದ ಸ್ಪರ್ಧೆಯಲ್ಲಿ ಸುಸ್ಥಿರ ಬೆಳವಣಿಗೆ ಕಂಡುಕೊಳ್ಳಲು ಅಗತ್ಯವಿರುವ ಮೂಲಭೂತ ಸೌಕರ್ಯ, ಗುಣಮಟ್ಟದ ಶಿಕ್ಷಣ, ಉತ್ಕøಷ್ಠ ಸಂಶೋಧನೆ ಕಾರ್ಯಕ್ರಮಗಳ ಮೂಲಕ ಸಶಕ್ತಗೊಳಿಸಲು ಮತ್ತು ಬಲಪಡಿಸಲು ಸಹಾಯಧನ ನೀಡುತ್ತಿರುವ 52 ಶ್ರೇಷ್ಠ ವಿಶ್ವವಿದ್ಯಾಲಯಗಳ ಪೈಕಿ ‘ಗುಲಬರ್ಗಾ ವಿಶ್ವವಿದ್ಯಾಲಯ’ವು ಒಂದಾಗಿದೆ. ಆದರಿಂದ ವಿದ್ಯಾರ್ಥಿಗಳು ವಿವಿಧ ವೃತ್ತಿ ಕ್ಷೇತ್ರಗಳ ಕೌಶಲ್ಯ ವೃದ್ಧಿ, ಉದ್ಯಮಶೀಲತೆ, ಕೈಗಾರಿಕೆ ವೃತ್ತಿ ನೈಪುಣ್ಯತೆ ಮೂಲಕ ಸದುಪಯೋಗ ಪಡಿಸಿಕೊಂಡು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ನೆರವಾಗಲಿದೆ ಎಂದರು.
ಕುಲಸಚಿವ ಡಾ. ಬಿ. ಶರಣಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ ವಿಶ್ವವಿದ್ಯಾಲಯ ಶೈಕ್ಷಣಿಕ ಅಭಿವೃದ್ಧಿಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಅನುದಾನದಿಂದ ಬಳಸಿಕೊಂಡು ವಿಶ್ವವಿದ್ಯಾಲಯ ಮತ್ತಷ್ಟು ಶ್ರೇಷ್ಠತೆ ಪಡೆಯಲು ಸಹಾಯಕವಾಗಲಿದೆ ಎಂದರು.
ಪಿಎಂ-ಉಷಾ ಯೊಜನೆಯ ನೋಡಲ್ ಅಧಿಕಾರಿ ಪ್ರೊ. ವಿ. ಎಂ. ಜಾಲಿ, ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಪ್ರೊ. ಎನ್. ಬಿ ನಡುವಿನಮನಿ, ಐಕ್ಯೂಎಸಿ ನಿರ್ದೇಶಕ ಪ್ರೊ. ಬಿ. ಆರ್. ಕೆರೂರ, ವಿತ್ತಾಧಿಕಾರಿ ಗಾಯತ್ರಿ ಶಿಕ್ಷಣ ನಿಕಾಯದ ಡೀನ್ ಪ್ರೊ. ಹೂವಿನಬಾವಿ ಬಾಬಣ್ಣ, ಕಲಾ ನಿಕಾಯದ ಡೀನ್ ಪ್ರೊ. ರಬ್ ಉಸ್ತಾದ, ವಾಣಿಜ್ಯ ಮತ್ತು ನಿರ್ವಹಣಾ ನಿಕಾಯದ ಡೀನ್ ಪ್ರೊ. ಬಿ. ವಿಜಯಾ, ಕಾನೂನು ನಿಕಾಯದ ಡೀನ್ ಪ್ರೊ.. ದೇವಿದಾಸ ಮಾಲೆ ಸೇರಿದಂತೆ ಸಿಂಡಿಕೇಟ್ ಸದಸ್ಯರು, ವಿದ್ಯಾವಿಷಯಕ ಪರಿಷತ್ ಸದಸ್ಯರು, ಸ್ನಾತಕೋತ್ತರ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ, ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರು ಭಾಗವಹಿಸಿದ್ದರು. ನೋಡಲ್ ಅಧಿಕಾರಿ ಪ್ರೊ. ವಿ. ಎಂ. ಜಾಲಿ ಕಾರ್ಯಕ್ರಮ ನಿರ್ವಹಿಸಿದರು. ದೈಹಿಕ ಶಿಕ್ಷಣ ವಿಭಾಗದ ಡಾ. ಎನ್. ಜಿ. ಕಣ್ಣೂರು ವಂದಿಸಿದರು.