ಗುವಿವಿ : “ಘನತ್ಯಾಜ್ಯ ನಿರ್ವಹಣೆಯ ಪರಿಹಾರಗಳು ಮತ್ತು ಹವಮಾನ ಬದಲಾವಣೆ” ಕಾರ್ಯಾಗಾರ

ಕಲಬುರಗಿ:ಮಾ.19:ಗುಲಬರ್ಗಾ ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ವಿಭಾಗ ಹಾಗೂ ಪ್ರಾಣಿಶಾಸ್ತ್ರ ವಿಭಾಗದ ಸಹಯೋಗದಲ್ಲಿ “ಘನತ್ಯಾಜ್ಯ ನಿರ್ವಹಣೆಯ ಪರಿಹಾರಗಳು ಮತ್ತು ಹವಮಾನ ಬದಲಾವಣೆ” ಕುರಿತು ಒಂದು ದಿನದ ಕಾರ್ಯಗಾರವನ್ನು ಪ್ರಾಣಿಶಾಸ್ತ್ರ ವಿಭಾಗದ ಡಾರ್ವಿನ್ ಸಭಾಂಗಣದಲ್ಲಿ ಮಾ,20 ರಂದು ಬೆಳಿಗ್ಗೆ 10:30 ಗಂಟೆಗೆ ಆಯೋಜಿಸಲಾಗಿದೆ.

ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ ಅಧ್ಯಕ್ಷತೆ ವಹಿಸುವರು. ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಭುವನೇಶ್ ದೇವಿದಾಸ್ ಪಾಟೀಲ್ ಮುಖ್ಯ ಅತಿಥಿಯಾಗಿ ಆಗಮಿಸುವರು.
ಗೌರವ ಅತಿಥಿಗಳಾಗಿ ಆಂಧ್ರಪ್ರದೇಶದ ಡಾ. ಅರ್ತೋಸ್ ಸೊಲ್ಯೂಷನ್ ಪ್ರೈವೇಟ್ ಲಿಮಿಟೆಡ್ ಅಧ್ಯಕ್ಷ ಡಾ. ಕಾಳಚರ್ ಎಚ್. ಸಿ. ಬಿ, ಮಣಿಪಾಲ್ ಸುಸೆರಾ ರಿಸೈಕ್ಲರ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಸಂಸ್ಥಾಪಕರು ಹಾಗೂ ಸಿಇಓ ಹಾಗೂ ಸಿವಿಕ್ಲೆನ್ ಟ್ರಾನ್ಸಪೋರ್ಟ್ ಪ್ರೈವೇಟ್ ಲಿಮಿಟೆಡ್ ಕೋ ಫೌಂಡರ್ ಹಾಗೂ ಸಿಇಓ ಅಭಿಶೇಕ್ ವಿ. ಎಸ್., ಕಾನೂನು ನಿಕಾಯದ ಡೀನ್, ಹಾಗೂ ಸಿಂಡಿಕೇಟ್ ಸದಸ್ಯ ಡಾ. ದೇವಿದಾಸ್ ಜಿ. ಮಾಲೆ ಹಾಗೂ ವಿದ್ಯಾ ವಿಷಯಕ ಪರಿಷತ್ ಸದಸ್ಯ ಡಾ. ಸುರೇಶ ಜಂಗೆ, ಪರಿಸರ ಅಧ್ಯಯನ ವಿಭಾಗದ ಅಧ್ಯಕ್ಷ ಡಾ. ಪ್ರಕಾಶ ಕರಿಯಜ್ಜನವರ್, ಪ್ರಾಣಿಶಾಸ್ತ್ರ ವಿಭಾಗದ ಅಧ್ಯಕ್ಷ ಪ್ರೊ. ಕೆ. ವಿಜಯ ಕುಮಾರ್ ಹಾಗೂ ಕುಲಸಚಿವೆ ಪ್ರೊ. ಮೇಧಾವಿನಿ ಕಟ್ಟಿ ಉಪಸ್ಥಿತರಿರುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.