ಗುವಿಗುನಲ್ಲಿ ಡಾ.ಜಗಜೀವನರಾಮ್ ಜಯಂತ್ಯೋತ್ಸವ

ಕಲಬುರಗಿ:ಎ.5:ಗುಲಬರ್ಗಾ ವಿಶ್ವವಿದ್ಯಾಲಯದ ಡಾ. ಬಾಬು ಜಗಜೀವನರಾಮ್ ಅಧ್ಯಯನ, ಸಂಶೋಧನಾ ಹಾಗೂ ವಿಸ್ತರಣಾ ಸಂಸ್ಥೆಯು ಡಾ. ಬಾಬು ಜಗಜೀವನರಾಮ್ ಅವರ 116ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಸರಳವಾಗಿ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಾಜವಿಜ್ಞಾನ ನಿಕಾಯದ ಡೀನರಾದ ಪೆÇ್ರ. ವ್ಹಿ.ಟಿ. ಕಾಂಬಳೆ, ಕುಲಸಚಿವರಾದ ಡಾ. ಬಿ. ಶರಣಪ್ಪ, ಮೌಲ್ಯಮಾಪನ ಕುಲಸಚಿವರಾದ ಪೆÇ್ರ. ಜ್ಯೋತಿ ಧಮ್ಮ ಪ್ರಕಾಶ, ಡಾ. ಬಾಬು ಜಗಜೀವನರಾಮ್ ಅಧ್ಯಯನ, ಸಂಶೋಧನಾ ಹಾಗೂ ವಿಸ್ತರಣಾ ಸಂಸ್ಥೆಯ ನಿರ್ದೇಶಕರಾದ ಪೆÇ್ರ. ಕೆ. ಲಿಂಗಪ್ಪ, ಪೆÇ್ರ. ಬಿ.ಆರ್. ಕೆರೂರ, ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪೆÇ್ರ. ಕೆ. ವಿಜಯಕುಮಾರ, ಡಾ. ಎನ್.ಜಿ. ಕಣ್ಣೂರ, ಡಾ. ಹಣಮಂತ ಜಂಗೆ ಹಾಗೂ ಕಾನೂನು ವಿಭಾಗದ ಮುಖ್ಯಸ್ಥರಾದ ಡಾ. ದೇವಿದಾಸ ಮಾಲೆ ಅವರು ವಂದಿಸಿದರು. ವಿಶ್ವವಿದ್ಯಾಲಯದ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು, ಸಂಶೋಧನಾ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.