ಗುಳೇದಗುಡ್ಡ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ : ಶಿಲ್ಪಾ ಹಳ್ಳಿ

ಗುಳೇದಗುಡ್ಡ,ನ12- ಸಮಾಜದ ಎಲ್ಲರ ಹಿರಿಯರ ಅಶೀರ್ವಾದದಿಂದ ಪುರಸಭೆ ಅಧ್ಯಕ್ಷಸ್ಥಾನ ನನಗೆ ಒಲಿದಿದೆ. ನಿಮ್ಮ ಪ್ರೀತಿವಿಶ್ವಾಸಕ್ಕೆ ನಾನು ತಲೆಬಾಗಿ ಅಧ್ಯಕ್ಷೆ ಹುದ್ದೆಯನ್ನು ಉತ್ತಮವಾಗಿ ನಿರ್ವಹಿಸಿ, ಸಮಾಜದ ಕೀರ್ತಿ ಹೆಚ್ಚಿಸುತ್ತೇನೆ ಎಂದರು.
ಮೇಲಿನ ಪೇಟಿಯ ಕುರುಹೀನಶೆಟ್ಟಿ ಸಮಾಜದ ವತಿಯಿಂದ ಅಧ್ಯಕ್ಷೆ ಶಿಲ್ಪಾ ಹಳ್ಳಿ ಅವರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ ಪುರಸಭೆ ಎಲ್ಲ ಸದಸ್ಯರ ಸಹಕಾರದೊಂದಿಗೆ ಹಾಗೂ ಶಾಸಕರ ಮಾರ್ಗದರ್ಶನದಲ್ಲಿ ಹೆಚ್ಚಿನ ಅನುಧಾನ ತರಿಸಿ ಗುಳೇದಗುಡ್ಡ ಪಟ್ಟಣದ ಅಭಿವೃದ್ಧಿಗೆ ಶ್ರಮವಹಿಸುತ್ತೇನೆ,ಜನರು ನನ್ನ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ದಕ್ಕೆ ಭಾರದಂತೆ ನೋಡಿಕೊಳ್ಳುತ್ತೇನೆ,ಜನರ ಬರವಸೆಗಳನ್ನು ಇಡೇರಿಸಲು ಪ್ರಮಾಣೀಕವಾಗಿ ಪ್ರಯತ್ನಿಸುತ್ತೇನೆ ಹಾಗೂ ಸಮಾಜದ ಕೆಲಸ ಕಾರ್ಯಗಳಿಗೆ ನಾನು ಯಾವಾಗಲೂ ಬೆಂಬಲವಾಗಿ ನಿಲ್ಲುತ್ತೇನೆ ಎಂದು ಪುರಸಭೆಯ ನೂತನ ಅಧ್ಯಕ್ಷೆ ಶಿಲ್ಪಾ ಹಳ್ಳಿ ಮಾತನಾಡಿದರು.

ಮಾಜಿ ಶಾಸಕ ಮಲ್ಲಿಕಾರ್ಜುನ ಮಾತನಾಡಿದರು ಈ ಸಂದರ್ಭದಲ್ಲಿ ಕುರುಹಿನಶೆಟ್ಟಿ ಸಮಾಜದ ಮಹೇಶ್ವರಸ್ವಾಮಿ ನೀಲಕಂಠಮಠ,ದೊಡ್ಡಮ್ಮರಪ್ಪ ಬನ್ನಿ, ಪುಂಡಲೀಕ ಮಾನುಟಗಿ, ಈರಣ್ಣ ಹಳ್ಳಿ, ರಮೇಶ ಅಗಸಿಮನಿ, ವಿಜಯಕುಮಾರ ಬೇಟಗೇರಿಗೌಡ್ರ,ಪರಪ್ಪ ಕುಮಚಗಿಗೌಡ್ರ, ಸುಭಾಸ ಬನ್ನಿ,ಅಶೋಕ ದಿಂಡಿ,ಶಂಕರಪ್ಪ ನೀಲನೂರ,ಚಂಬಣ್ಣ ಮುಳಗುಂದ ಮತ್ತಿತರರು ಇದ್ದರು.