ಗುಳಿಗಜ್ಜ ಕಟ್ಟೆಯಲ್ಲಿ ಚಪ್ಪಲಿ ಪತ್ತೆ

ಕೊಣಾಜೆ, ಎ.೭- ಪಜೀರು ಗ್ರಾಮದ ಮುಚ್ಚಿರ ಕಲ್ಲು ಗುಳಿಗಜ್ಜ ಕಟ್ಟೆಯ ಮೇಲೆ ಸೋಮವಾರ ರಾತ್ರಿ ಚಪ್ಪಲಿ ಪತ್ತೆಯಾಗಿದ್ದು, ಕಿಡಿಗೇಡಿಗಳ ಕೃತ್ಯವಾಗಿರಬಹುದು ಎಂದು ಶಂಕಿಸಲಾಗಿದೆ.
ಪಜೀರು ಸಮೀಪದ ಮುಚ್ಚಿರ ಕಲ್ಲು ಗುಳಿಗ ಸಾನಿಧ್ಯವು ಅತೀ ಕಾರಣೀಕ ಕ್ಷೇತ್ರವಾಗಿದ್ದು ಎಲ್ಲ ಧರ್ಮೀಯರ ಭಯ, ಭಕ್ತಿಯ ತಾಣವಾಗಿದೆ. ಕೋಮು ಸಾಮರಸ್ಯವುಳ್ಳ ಈ ಪ್ರದೇಶದಲ್ಲಿ ಕಿಡಿಗೇಡಿಗಳು ವಿಧ್ವಂಸಕ ಕೃತ್ಯ ಮೆರೆದಿದ್ದಾರೆ. ಕಳೆದ ಹಲವು ದಿನಗಳಿಂದ ಕೊಂಡಾಣ ಕ್ಷೇತ್ರ ಸೇರಿದಂತೆ ಇತರ ಪ್ರದೇಶಗಳಲ್ಲಿ ಕಿಡಿಗೇಡಿಗಳು ವಿಕೃತಿ ಮೆರೆಯುತ್ತಿದ್ದಾರೆ. ಇದೀಗ ಪಜೀರು ಗುಳಿಗ ಕಟ್ಟೆಯ ಬಳಿ ಚಪ್ಪಲಿ ಪತ್ತೆಯಾಗಿದ್ದು, ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಚ್ಚಿರ ಕಲ್ಲು ಕ್ಷೇತ್ರದ ಮುಖಂಡರು ಕೊಣಾಜೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.