ಗುಲ್ಬರ್ಗ ವಿವಿ ವಾಸಂತಿ ನಾಯಕ ದ್ವಿತೀಯ ರ್‍ಯಾಂಕ್

ಸಿಂಧನೂರು,ಜೂ.೧೫- ನಗರದ ಅನಿಕೇತನ ಕಾಲೇಜಿನ ವಿದ್ಯಾರ್ಥಿನಿಯಾದ ವಾಸಂತಿ ನಾಯಕ ಜವಳಗೇರಾ ಗುಲ್ಬರ್ಗಾ ವಿಶ್ವ ವಿದ್ಯಾಲಯದ ಬಿ.ಎ.ವಿಭಾಗದಲ್ಲಿ ವಿಶ್ವ ವಿದ್ಯಾಲಯಕ್ಕೆ ಎರಡನೇ ರ್‍ಯಾಂಕ್ ಪಡೆದು ಕೊಂಡು ತಾಲೂಕಿಗೆ ಕೀರ್ತಿ ತಂದಿದ್ದಾಳೆ.
ನಗರದ ಅನಿಕೇತನ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿನಿಯಾದ ವಾಸಂತಿ ಮರಿಯಣ್ಣ ನಾಯಕ ಜವಳಗೇರಾ ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಬಿ.ಎ. ವಿಭಾಗದಲ್ಲಿ ವಿಶ್ವ ವಿದ್ಯಾಲಯಕ್ಕೆ ದ್ವಿತೀಯ ರ್‍ಯಾಂಕ್ ಪಡೆದುಕೊಂಡು ಕಾಲೇಜಿನ ಹೆಸರು ತರುವ ಜೊತೆಗೆ ತಾಲೂಕಿಗೆ ಕೀರ್ತಿ ತಂದಿದ್ದಾಳೆ.
ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಬಿ.ಎ ವಿಭಾಗದಲ್ಲಿ ಎರಡನೇ ರ್‍ಯಾಂಕ್ ಪಡೆದ ವಿದ್ಯಾರ್ಥಿನಿಯಾದ ವಾಸಂತಿ ಮರಿಯಣ್ಣ ನಾಯಕ ಸಾಧನೆ ಗುರುತಿಸಿ ಅನಿಕೇತನ ಪದವಿ ಮಹಾವಿದ್ಯಾಲಯದಲ್ಧಿ ಕಾಲೇಜ ಆಡಳಿತ ಮಂಡಳಿ ವತಿಯಿಂದ ವಿದ್ಯಾರ್ಥಿನಿಗೆ ಸನ್ಮಾನಿಸಿ ಗೌರವಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ,ತಿಮ್ಮಣ್ಣ ರಾಮತ್ನಾಳ, ಉಪನ್ಯಾಸಕರಾದ ರಮೇಶ, ಜಗದೀಶ ಪ್ರಕಾಶ, ರವಿಚಂದ್ರ, ಈರಣ್ಣ, ಭಾರತಿ ಸುನೀತಾ, ಶಂಶಾದ ಬೇಗಂ. ಸೇರಿದಂತೆ ಇತರರು ಸನ್ಮಾನ್ಯ ಕಾರ್ಯ ಕ್ರಮದಲ್ಲಿ ಪಾಲ್ಗೊಂಡಿದ್ದರು.