ಗುಲ್ಬರ್ಗ ವಿವಿ ಗ್ರಂಥಾಲಯದ ಗ್ರಂಥಪಾಲಕರಾಗಿ ಡಾ. ಸುರೇಶ್ ಜಂಗೆ ಅಧಿಕಾರ ಸ್ವೀಕಾರ

ಕಲಬುರ್ಗಿ :ಜೂ.2: ಗುಲ್ಬರ್ಗ ವಿಶ್ವವಿದ್ಯಾಲಯದ ಗ್ರಂಥಾಲಯದ ನೂತನ ಗ್ರಂಥಪಾಲಕರಾಗಿ ಡಾ. ಸುರೇಶ್ ಜಂಗೆ ಅವರು ಅಧಿಕಾರ ಸ್ವೀಕಾರ ಮಾಡಿದರು
ಡಾ. ಸುರೇಶ್ ಜಂಗೆ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿ ಸದಾ ವಿದ್ಯಾರ್ಥಿಗಳೊಂದಿಗೆ ಹಸನ್ಮುಖಿಯಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಸಹಾಯ ಸಹಕಾರ ನೀಡುತ್ತಾ ಮಗುವಿನ ಹಂತ ಮನಸಿನ ಮೇಷ್ಟ್ರು ಎಂದು ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಎಲ್ಲಾ ವಿದ್ಯಾರ್ಥಿಗಳ ಬಾಯಲ್ಲಿ ಚಿರಪರಿಚಿತರಾಗಿದ್ದಾರೆ. ಈ ಸಂದರ್ಭದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಅತಿಥಿ ಉಪನ್ಯಾಸಕರಾದ ಡಾ. ರಾಜಕುಮಾರ ಎಂ. ದಣ್ಣೂರ ಅವರು ಪ್ರೀತಿಯ ಮೇಷ್ಟ್ರುಗೆ ಮನದುಂಬಿ ಅಭಿನಂದನೆಗಳು ಸಲ್ಲಿಸಿದ್ದಾರೆ.