ಗುಲ್ಬರ್ಗ ವಿವಿಯ ರೆಮಿಡಿಯಲ್ ಕೋಚಿಂಗ್ ಸೆಂಟರ್ ನಿರ್ದೇಶಕರಾಗಿ ಡಾ. ಸುರೇಶ್ ಜಂಗೆ ನೇಮಕ

ಕಲಬುರಗಿ:ಎ.26: ಗುಲ್ಬರ್ಗ ವಿಶ್ವವಿದ್ಯಾಲಯದ ಗ್ರಂಥಾಲಯದ ಮುಖ್ಯ ಗ್ರಂಥಪಾಲಕ ಡಾ. ಸುರೇಶ್ ಜಂಗೆ ಅವರಿಗೆ ರೆಮಿಡಿಯಲ್ ಕೋಚಿಂಗ್ ಸೆಂಟರ್ ನಿರ್ದೇಶಕರನ್ನಾಗಿ ಕುಲಸಚಿವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಡಾ. ಸುರೇಶ ಜಂಗೆ ಅವರು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿರುವ ಬಹು ದೊಡ್ಡ ವಾಗ್ಮಿಗಳು ಆಗಿದ್ದಾರೆ. ಅವರು ತಂತ್ರಜ್ಞಾನ ಕ್ಷೇತ್ರದಲ್ಲಿ ತಮ್ಮದೇ ಆದ ಕೊಡುಗೆ ನೀಡಿದ ವಿಷಯ ತಜ್ಞರು ಮತ್ತು ಸಂಶೋಧಕರು ಆಗಿದ್ದಾರೆ. ಹೀಗಾಗಿ ಅವರ ಅಪಾರವಾದ ಜ್ಞಾನವನ್ನು ಗುರುತಿಸಿ ಅವರಿಗೆ ಹೆಚ್ಚಿನ ಜವಾಬ್ದಾರಿಯನ್ನು ನೀಡಲಾಗಿದೆ.
ಡಾ. ಸುರೇಶ್ ಜಂಗೆ ಅವರಿಗೆ ಗುಲ್ಬರ್ಗ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನ ನಿಕಾಯದ ಹಿರಿಯ ಡೀನರಾದ ಪೆÇ್ರ ವಿ. ಟಿ. ಕಾಂಬಳೆ, ಆಂಗ್ಲ ವಿಭಾಗದ ಮುಖ್ಯಸ್ಥ ಡಾ. ನಿಂಗಣ್ಣ, ಪತ್ರಿಕೋದ್ಯಮ ವಿಭಾಗದ ಅತಿಥಿ ಸಹಾಯಕ ಪ್ರಾಧ್ಯಾಪಕ ಡಾ. ರಾಜಕುಮಾರ ಎಂ. ದಣ್ಣೂರ, ಡಾ. ಗುಂಡಪ್ಪ ಸಿಂಗೆ, ಸಿದ್ದು, ದೊಡ್ಡಮನಿ, ಮತ್ತು ಗ್ರಂಥಾಲಯ ಸಿಬ್ಬಂದಿಗಳು ಅಭಿನಂದನೆಗಳು ಸಲ್ಲಿಸಿದ್ದಾರೆ.