ಗುಲ್ಬರ್ಗ ವಿವಿಯ ಪ್ರಭಾರಿ ಕುಲಪತಿಗಳಾಗಿ ಪ್ರೊ. ವಿ. ಟಿ ಕಾಂಬಳೆ

ಕಲಬುರಗಿ,ಮೇ.28: ಗುಲ್ಬರ್ಗ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನ ನಿಕಾಯದ ಹಿರಿಯ ಡೀನರಾದ ಪ್ರೊ ವಿ. ಟಿ. ಕಾಂಬಳೆ ಅವರು ಪ್ರಭಾರಿ ಕುಲಪತಿಗಳಾಗಿ ನೇಮಕ ಮಾಡಲಾಗಿದೆ ಎಂದು ಕುಲಪತಿ ಪ್ರೊ, ದಯಾನಂದ ಅಗಸರ್ ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಕುಲಪತಿ ಪ್ರೊ, ದಯಾನಂದ ಅಗಸರ್ ಅವರು ಸ್ಟೇಟ್ ಹೈಯರ್ ಎಜುಕೇಷನ್ ಕೌನ್ಸಿಲ್ ಕಾರ್ಯಕ್ರಮ ನಿಮಿತ್ಯ ಹತ್ತು ದಿನಗಳ ಕಾಲ ಬ್ರಿಟನ್ ದೇಶಕ್ಕೆ ತೆರಳಿದ್ದಾರೆ. ಅಲ್ಲಿಯವರೆಗೆ ಪ್ರೊ, ವಿ. ಟಿ. ಕಾಂಬಳೆ ಅವರು ಪ್ರಭಾರಿ ಕುಲಪತಿಗಳಾಗಿ ಕಾರ್ಯನಿರ್ವಹಿಸುತ್ತಾರೆ.