ಗುಲ್ಬರ್ಗ ಕ್ಲಬ್ ಕಾರ್ಯದರ್ಶಿಯಾಗಿ ಸಂಗೋಳಗಿ ಆಯ್ಕೆ

ಕಲಬುರಗಿ:ಸೆ.4: ನಗರದ ಸಾರ್ವಜನಿಕ ಉದ್ಯಾನವನದಲ್ಲಿರುವ ಪ್ರತಿಷ್ಠಿತ ಗುಲ್ಬರ್ಗ ಕ್ಲಬ್‍ಗೆ ಒಂದು ವರ್ಷದ 2023-2024ನೇ ಸಾಲಿನ ಅವಧಿಗಾಗಿ ನಡೆದ ಚುನಾವಣೆಯಲ್ಲಿ ಪ್ರಮುಖ ಹುದ್ದೆಯಾಗಿರುವ ಕಾರ್ಯದರ್ಶಿಯಾಗಿ ಚಂದ್ರಕಾಂತ ಸಂಗೋಳಗಿ ಚುನಾಯಿತರಾಗಿದ್ದಾರೆ. ಕ್ಲಬ್‍ನ ಅವರಣದಲ್ಲಿ ಸೆ. 3ರ ರವಿವಾರದಂದು ನಡೆದ ಪ್ರತಿಷ್ಠೆತೆಯ ಈ ಚುನಾವಣೆಯಲ್ಲಿ ಸಂಗೋಳಗಿ 294 ಮತ ಪಡೆದು ಪುನರಾಯ್ಕೆಯಾದರೆ ಮಲ್ಲಿನಾಥ ಗುಡೆದ 104 ಹಾಗೂ ಡಾ. ಪ್ರಕಾಶ ಬಬಲಾದಿ 91 ಮತಗಳನ್ನು ಪಡೆದು ಸೋಲು ಅನುಭವಿಸಿದರು.
ಅದೇ ರೀತಿ ಉಪಾಧ್ಯಕ್ಷರಾಗಿ 277 ಮತಗಳನ್ನು ಪಡೆದು ಡಾ. ಎಸ್.ಎನ್. ಪಾಟೀಲ್ ಆಯ್ಕೆಯಾದರೆ 212 ಮತಗಳನ್ನು ಪಡೆದು ವಿಜಯಕುಮಾರ ಸೋಲು ಅನುಭವಿಸಿದರು. ಜಂಟಿ ಕಾರ್ಯದರ್ಶಿಯಾಗಿ ರೇವಣಸಿದ್ದ ನಾಗೂರೆ 356 ಮತಗಳನ್ನು ಪಡೆದು ಚುನಾಯಿತರಾದರೆ ರವಿ ಉದನೂರ 133 ಮತಗಳನ್ನು ಪಡೆದು ಸೋತರು. ಖಜಾಂಚಿಯಾಗಿ ಸಾತಪ್ಪ ಪಟ್ಟಣಕರ್ 328 ಮತ ಪಡೆದು ಚುನಾಯಿತರಾದರೆ ಶೇಖರ ಮೋದಿ 161 ಮತ ಪಡೆದು ಸೋಲು ಅನುಭವಿಸಿದರು.
ಕ್ಲಬ್‍ನ ಆಡಳಿತ ಮಂಡಳಿ ಸದಸ್ಯರಾಗಿ ಜಗದೀಶ ಅಲ್ಲದ ( ಪಡೆದ ಮತ 438), ಅಶೋಕಕುಮಾರ ಬಿ. ಮಾಲಿ (378), ಅನೀಕುಮಾರ ನಿಪ್ಪಾಣಿ (373), ಚಂದ್ರಶೇಖರಯ್ಯ ಕಮಲಾಪುರ (373), ಚಿಟ್ಟಾ ಬಸವರಾಜ (364) ನಿತೀನ ಗಿಯಾ (338) ಹಾಗೂ ವಿಶ್ವನಾಥ ಕಟ್ಟಿಮನಿ (287) ಆಯ್ಕೆಯಾಗಿದ್ದಾರೆ. ಚುನಾವಣೆ ನಡೆದು ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಚಂದ್ರಕಾಂತ ಸಂಗೋಳಗಿ ನೇತೃತ್ವದಲ್ಲಿ ವಿಜಯೋತ್ಸವ ನಡೆಯಿತು. ನಿವೃತ್ತ ಪ್ರಾಧ್ಯಾಪಕ ಪ್ರೊ. ನರೇಂದ್ರ ಬಡೆಶೇಷಿ ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು.

ಹಿಂದಿನ ಒಂದು ವರ್ಷದ ಅವಧಿಗೆ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿರುವ ಚಂದ್ರಕಾಂತ ಸಂಗೋಳಗಿ ಕಳೆದ ಅವಧಿಯಲ್ಲಿ ಉತ್ತಮ ಕೆಲಸ ಮಾಡಿದ್ದಲ್ಲದೇ ಪ್ರಮುಖವಾಗಿ ಇಲ್ಲಿಯವರೆಗೆ ಆಗದ ವನ್ ಪ್ಲಸ್ ವನ್ ಮೆಂಬರ ಮಾಡಿರುವುದು ಚುನಾವಣೆಯಲ್ಲಿ ಗೆಲುವಿಗೆ ಪೂರಕವಾಯಿತು ಎಂದು ವಿಶ್ಲೇಷಿಸಲಾಗುತ್ತಿದೆ. ಗೆಲುವಿನ ನಂತರ ಮಾತನಾಡಿದ ಕ್ಲಬ್‍ನ ಎರಡನೇ ಬಾರಿಗೆ ಕಾರ್ಯದರ್ಶಿಯಾಗಿ ಆಯ್ಕೆಯಾದಚಂದ್ರಕಾಂತ ಸಂಗೋಳಗಿ, ಕ್ಲಬ್‍ನ ಸದಸ್ಯ ಮತದಾರರು ತಮ್ಮ ಮೇಲೆ ಹೆಚ್ಚಿನ ಭರವಸೆಯಿಟ್ಟು ಚುನಾಯಿಸಿದ್ದಾರೆ. ಮತದಾರರ ನಿರೀಕ್ಷೆಯಂತೆ ಕ್ಲಬ್‍ನ್ನು ಸುಧಾರಣೆಗೆ ಅವಿರತವಾಗಿ ಶ್ರಮಿಸಲಾಗುವುದು ಎಂದು ತಿಳಿಸಿದರು. ಜಿಲ್ಲಾಧಿಕಾರಿಗಳು ಕ್ಲಬ್‍ನ ಅಧ್ಯಕ್ಷರಾಗಿದ್ದಾರೆ. ಖ್ಯಾತ ಉದ್ಯಮಿಗಳು, ವೈದ್ಯರು, ರಾಜಕಾರಣಿಗಳು ಹಾಗೂ ಅಧಿಕಾರಿಗಳು ಕ್ಲಬ್‍ನ ಸದಸ್ಯರಾಗಿರುವುದು ಕ್ಲಬ್‍ನ ವಿಶೇಷವಾಗಿದೆ.