ಗುಲಾಬಿ ಹೂವಿನ ಉಪಯೋಗಗಳು

ಹೂವುಗಳೆಲ್ಲಾ ಅತಿ ಸುಂದರವಾದದ್ದು ಗುಲಾಬಿ ಹೂ. ಗುಲಾಬಿ ಇಲ್ಲದ ಹೂ ದೋಟವೇ ಅಲ್ಲ. ಉಡಿeeಞ ಕವಿಯೊಬ್ಬ ಕಿueeಟಿ oಜಿ ಜಿಟoತಿeಡಿ ಎಂದು ಗುಲಾಬಿಯನ್ನು ಕೊಂಡಾಡಿದ್ದಾನೆ. ಕವಿಗಳು ಸುಂದರವಾದ ಚೆಂದುಟಿಗಳನ್ನು ಖose ಐiಠಿs ಎಂದು ಕರೆಯುವುದುಂಟು. ಓiಞoಟಚಿs ಎಂಬ ವೈದ್ಯ ಜ್ಯೋತಿಷಿ ಈ ಹೂವಿನ ಅದ್ಭತವಾದ ಗುಣಗಳ ಬಗ್ಗೆ ಒಂದು ಪುಸ್ತಕವನ್ನೇ ಬರೆಯಬಹುದು ಅಂತ ಹೇಳಿದ್ದಾನೆ. ಜಹಂಗೀರ್ ನೂರ್‌ಜಹಾನಳ ಮದುವೆಯಲ್ಲಿ ಗುಲಾಬಿಯ ಸುಗಂಧ ಜಲ, ಗುಲಾಬ್ ವೆನಿಗರ್, ಗುಲಾಬಿ ಅರ್ಕ್, ಖose ಂಣಣಚಿಡಿ (ಅತ್ತರ್)ಗಳು ಗುಲಾಬಿಯ ಇತರ ಬಗೆಗಳಾಗಿವೆ.
ಗುಲಾಬಿ ಹೂ ಎಷ್ಟು ಮೃದುವಾಗಿದೆಯೋ, ಇದರ ಬಳಕೆಯಿಂದ ಅಷ್ಟೇ ಮೃಧುತ್ವ ಚರ್ಮಕ್ಕೆ ಬರುತ್ತದೆ. ಬೇಸಿಗೆ ಬಂದಾಕ್ಷಣ ಮನುಷ್ಯನಿಗೆ ಆಯಾಸ, ಬಳಲಿಕೆ, ಶರೀರದಲ್ಲಿ ಉಷ್ಣಾಂಶ ಹೆಚ್ಚುವಿಕೆ ಎಲ್ಲವೂ ಪ್ರಾರಂಭವಾಗುತ್ತದೆ.
ಪಿತ್ತ ಪ್ರಕೋಪದಿಂದ ಪಿತ್ತವಾಂತಿ, ಪಿತ್ತಾತಿಸಾರ, ತಲೆಸುತ್ತು ಎಲ್ಲ ಸರ್ವೇಸಾಮಾನ್ಯ ಬೆವರಿನ ದಿನದ ಸಮಸ್ಯೆಗಳು. ಈ ಎಲ್ಲಾ ಸಮಸ್ಯೆಗಳಿಗೆ ಗುಲಾಬಿ ಹೂವಿನಿಂದ ಚಿಕಿತ್ಸೆಯನ್ನು ಮಾಡಬಹುದು.
ಔಷಧೀಯವಾಗಿ ಈ ಗುಲಾಬಿ ಹೂವನ್ನು ಹೇಗೆ ಬಳಕೆ ಮಾಡಿಕೊಳ್ಳಬಹುದೆಂದು ಇಲ್ಲಿ ವಿವರಿಸಲಾಗಿದೆ.

೧. ಬಾಯಾರಿಕೆ, ಬಳಲಿಕೆ, ಆಯಾಸ ಹಾಗೂ ಶರೀರದ ಉಷ್ಣಾಂಶ ಕಡಿಮೆಯಾಗಲು: ಖose hoಟಿeಥಿಯನ್ನು ಬಳಸಬೇಕು. ಇದನ್ನು ಪ್ರತಿನಿತ್ಯ ಸೇವಿಸಿದರೆ ಶರೀರದ ಉಷ್ಣಾಂಶ ತಗ್ಗುತ್ತದೆ. ಖose hoಟಿeಥಿ ಮಾಡುವ ಬಗ್ಗೆ: ಗುಲಾಬಿ ಹೂವಿನ ದಳಗಳನ್ನು ಸ್ವಲ್ಪ ಬಿಸಿನೀರಿನಲ್ಲಿ ಹಾಕಿ ಜಜ್ಜಿ ಸೇರಿಸಿ ಜೇನುತುಪ್ಪದೊಡನೆ ಬೆರೆಸಬೇಕು.
೨. ರೋಸ್ ವಾಟರ್: ರೋಸ್ ವಾಟರ್‌ನಿಂದ ಸಹ ಬಹಳ ಉಪಯೋಗಗಳಿವೆ. ಹತ್ತಿಯಲ್ಲಿ ರೋಸ್ ವಾಟರ್‌ಅನ್ನು ನೆನೆಸಿ ಕಣ್ಣುಗಳ ಮೇಲೆ ೧೦-೧೫ ನಿಮಿಷ ಇಟ್ಟುಕೊಳ್ಳುವುದರಿಂದ ಕಣ್ಣುರಿ ಕಡಿಮೆಯಾಗುತ್ತದೆ. ಇದೇ ರೋಸ್‌ವಾಟರ್‌ನಿಂದ ಮುಖಕ್ಕೆ ಲೇಪಿಸುತ್ತಿದ್ದರೆ ಚರ್ಮದ ಕಾಂತಿ ಹೆಚ್ಚಾಗುತ್ತದೆ.
೩. ಬಾಯಿಹುಣ್ಣು ನಿವಾರಣೆಗೆ: ಗುಲಾಬಿ ಎಸಳುಗಳನ್ನು ಬಿಡಿಸಿ ನೆರಳಲ್ಲಿ ಒಣಗಿಸಿ ಪುಡಿಮಾಡಿಟ್ಟುಕೊಂಡು ಬೇಕಾದಾಗ ನೀರಿಗೆ ಹಾಕಿ ಸ್ವಲ್ಪ ಸಕ್ಕರೆ ಹಾಕಿ ಕುಡಿಯುವುದರಿಂದ ಬಾಯಿಹುಣ್ಣು ನಿವಾರಣೆಯಾಗುತ್ತದೆ.
೪. ಹಲ್ಲುಗಳ ಆರೋಗ್ಯ ಕಾಪಾಡಿಕೊಳ್ಳಲು: ಮೇಲೆ ಹೇಳಿದ ಪುಡಿಯನ್ನು ನೀರಿಗೆ ಹಾಕಿ ಕುದಿಸಿ ಅರ್ಧ ಅಂಶ ಇಳಿಸಿ ಕಷಾಯ ಮಾಡಿ ಬಾಯಿ ಮುಕ್ಕಳಿಸಬೇಕು.
೫. ಸಿಟ್ಟು, ಭಯ ನಿವಾರಣೆಗೆ: ಗುಲಾಬಿಯಿಂದ ತೆಗೆಯುವ ತೈಲ ಬಳಕೆಯಿಂದ ಅತ್ಯಂತ ಸಿಟ್ಟು, ಭಯ ನಿವಾರಣೆ ಹಾಗೂ ಮಾನಸಿಕ ದೌರ್ಬಲ್ಯಗಳಿಗೆ ಉಪಯೋಗವಾಗುತ್ತದೆ.
೬. ವೀರ್ಯಾಣು ಕೊರತೆಗೆ: ಗಂಡಸರಲ್ಲಿ ವೀರ್ಯಾಣು ಕೊರತೆಯಿದ್ದಾಗ ವೈದ್ಯರ ಸಲಹೆ ಮೇಲೆ ಗುಲಾಬಿ ಚಿಕಿತ್ಸೆ ಮಾಡಬಹುದು.

೧. ಗೌರಮ್ಮನ ಆರೋಗ್ಯ ಸೂತ್ರಗಳು ಪ್ರಿಸ್ಮ್ ಬುಕ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಪ್ರಕಟಣೆ
೨. ಡಾ. ಗೌರಿ ಸುಬ್ರಮಣ್ಯ ಆಯುರ್ವೇದ ತಜ್ಞರು ಮತ್ತು ಧರ್ಮದರ್ಶಿಗಳು ಮುಕ್ತಿನಾಗ ದೇವಸ್ಥಾನ ಫೋನ್ ನಂ. ೯೫೩೫೩೮೩೯೨೧