ಬೆಂಗಳೂರು,ಜೂ.೧೭-ನಟ ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಗುಲಾಬಿ ಬಣ್ಣದ
ಉಡುಗೆಯಲ್ಲಿ ಕಂಗೊಳಿಸಿದ್ದಾರೆ. ಕಾಂತಾರ ರಾಣಿ ತುಂಬಾ ಮುದ್ದಾಗಿದ್ದಾರೆ ಎನ್ನುವುದು ಅಭಿಮಾನಿಗಳ ಅನಿಸಿಕೆ.
ನಟ ರಿಷಬ್ ಶೆಟ್ಟಿ ತಮ್ಮ ಪತ್ನಿ ಪ್ರಗತಿ ಶೆಟ್ಟಿ
ಗುಲಾಬಿ ಬಣ್ಣದ ಉಡುಗೆಯಲ್ಲಿ ಕಂಗೊಳಿಸುವ
ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ನೋಡೋಕೆ ತುಂಬಾ ಮುದ್ದಾಗಿ ಕಾಣ್ತಿದೆ.
ಕಾಂತಾರ ಸಿನಿಮಾಗೆ ಇತ್ತೀಚೆಗೆ ಪ್ರಶಸ್ತಿ ಬಂದಿತ್ತು. ಹೀಗಾಗಿ ಅವರು ಅದನ್ನು ಸ್ವೀಕರಿಸಲು ಸಿದ್ಧರಾಗಿದ್ದರು. ನಟಿ ಪ್ರಗತಿ ಶೆಟ್ಟಿ ಅವರ ಫೋಟೋಗಳನ್ನು ಅವರ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.
ಉಡುಗೆಗೆ ತಕ್ಕಂತೆ ಕೇಶಾಲಂಕಾರ ಮಾಡಿಕೊಂಡು ಮಲ್ಲಿಗೆ ಹೂವನ್ನು ಮುಡಿದು ಅಲಂಕರಿಸಿಕೊಂಡು,ಸುಂದರವಾಗಿ ನಗುತ್ತಾ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಎಲ್ಲಾ ಫೋಟೋಗಳಲ್ಲಿ ಕಾಂತರಾ ರಾಣಿ ಸೂಪರ್.
ಪ್ರಗತಿ ಶೆಟ್ಟಿ ಶೇರ್ ಮಾಡಿರುವ ಫೋಟೋಗಳಿಗೆ ೯ ಸಾವಿರಕ್ಕೂ ಹೆಚ್ಚು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅತ್ತಿಗೆ ತುಂಬಾ ಮುದ್ದಾಗಿ ಕಾಣುತ್ತೀರಿ. ಕನ್ನಡದ ಹೆಮ್ಮೆ, ಸೂಪರ್ ಶೆಟ್ರೆ, ಕ್ಯೂಟ್ ಎಂದು ಅಭಿಮಾನಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಪ್ರಗತಿ ಶೆಟ್ಟಿ ರಿಷಬ್ ಶೆಟ್ಟಿ ಜೊತೆ ಮದುವೆಯಾಗಿ ೬ ವರ್ಷಗಳಾಗಿವೆ. ಅವರು ತಮ್ಮ ಮಗ ರಣ್ವಿತ್ ಮತ್ತು ಮಗಳು ರಾಧ್ಯಾ ಅವರೊಂದಿಗೆ ಸಂತೋಷದ ಜೀವನವನ್ನು ನಡೆಸುತ್ತಿದ್ದಾರೆ. ರಿಷಬ್ ಶೆಟ್ಟಿ ಕೂಡ ತಮ್ಮ ಕುಟುಂಬಕ್ಕೆ ಹೆಚ್ಚಿನ ಸಮಯವನ್ನು ನೀಡುತ್ತಾರೆ.
ಪ್ರಗತಿ ಶೆಟ್ಟಿ ಮೊದಲು ರಿಷಬ್ ಶೆಟ್ಟಿಯ ಅಭಿಮಾನಿ. ಥಿಯೇಟರ್ ಬಳಿ ಸೆಲ್ಫಿ ತೆಗೆದುಕೊಂಡ ಈ ಜೋಡಿ ನಂತರ ನಿಜ ಜೀವನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಬ್ಬರದೂ ಅನುರೂಪ. ಜೋಡಿ ಎಂದು ಎಲ್ಲರೂ ಭಾವಿಸುತ್ತಾರೆ.
ರಿಷಬ್ ಶೆಟ್ಟಿ ಅವರಿಗೆ ಪ್ರಗತಿ ಶೆಟ್ಟಿ ಸದಾ ಬೆಂಬಲವಾಗಿ ನಿಂತಿದ್ದಾರೆ. ಅವರ ನೋವು-ನಲಿವಿನಲ್ಲಿ ಜೊತೆಗಿದ್ದಾರೆ
ಪ್ರಗತಿ ಶೆಟ್ಟಿ ಯಾವಾಗಲೂ ರಿಷಬ್ ಶೆಟ್ಟಿಯನ್ನು ಎಲ್ಲ ಕೆಲಸಗಳಿಗೂ ಬೆಂಬಲವಾಗಿ ನಿಲ್ಲುತ್ತಾರೆ. ಕಾಂತಾರ ಚಿತ್ರದಲ್ಲೂ ನಟಿಸಿದ್ದರು. ರಾಣಿ ಪಾತ್ರ ನಿರ್ವಹಿಸಿದ್ದಾರೆ.
ಮದುವೆಯಾದ ದಂಪತಿ ಇತರರಿಗೆ ಮಾದರಿಯಾಗಿ ಬದುಕುತ್ತಿದ್ದಾರೆ. ನಿಮ್ಮ ಕುಟುಂಬ ಸದಾ ಹೀಗೆಯೇ ಇರಲಿ ಎಂದು ಅಭಿಮಾನಿಗಳು ಹಾರೈಕೆ. ಪ್ರಗತಿ ಶೆಟ್ಟಿ ೮೫.೮ಏ ಅನುಯಾಯಿಗಳನ್ನು ಹೊಂದಿದ್ದಾರೆ.