ಗುಲಾಬಿ ಆಂದೋಲನ ಜಾಥಾ: ಆರೋಗ್ಯವಂತ ಭಾರತಕ್ಕಾಗಿ ತಂಬಾಕು ಸೇವನೆ ಬಿಡಿ

ವಿಜಯಪುರ, ಡಿ.1-ಜಿಲ್ಲೆಯಲ್ಲಿ ತಹಸಿಲ್ದಾರ ಸಿದ್ದು ಭೋಸಗಿ ಹಾಗೂ ಜಿಲ್ಲಾ ಸರ್ವೇಕ್ಷಣಾಧಿಕಾರಿ ಎಂ.ಬಿ ಬಿರಾದಾರ ಅವರು ಜಂಟಿಯಾಗಿ ಗುಲಾಬಿ ಆಂದೋಲನ ಜಾಥಾಕ್ಕೆ ದಿನಾಂಕ : 29-11-2021 ರಂದು ಚಾಲನೆ ನೀಡಿದರು.
ನಂತರ ಸಾರ್ವಜನಿಕರನ್ನುದ್ದೇಶಿಸಿ ತಂಬಾಕು ವಸ್ತುಗಳ ಸೇವನೆ ಬಿಡಲು ನಿರ್ಧರಿಸಿ ಮತ್ತು ಅದಕ್ಕೆ ಬದ್ಧರಾಗಿರಿ. ಯಾವುದೇ ಬಗೆಯ ತಂಬಾಕನ್ನು ಸೇವನೆ ಮಾಡಬೇಡಿ ಎಂದು ಸಾರ್ವಜನಿಕರಲ್ಲಿ ಅವರು ಮನವಿ ಮಾಡಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಮ್.ಬಿ ಬಿರಾದಾರ ಅವರು ನೀವು ತಂಬಾಕು ಸೇವನೆ ಬಿಡುತ್ತಿರೆಂದು ಕುಟುಂಬದವರಿಗೆ ತಿಳಿಸಿ ಹಾಗೂ ಅವರ ಸಹಾಯವನ್ನು ಪಡೆಯಿರಿ ನಿಮಗೆ ಧೂಮಪಾನ ಮಾಡಲು ಪ್ರಚೋದನೆ ಉಂಟಾಗುವ ಸಂದರ್ಭಗಳನ್ನು ಗುರುತಿಸಿ ಅದರಿಂದ ದೂರವಿರಿ ಎಂದು ಹೇಳಿದರು.
ಜಾಥಾ ಕಾರ್ಯಕ್ರಮದಲ್ಲಿ ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ. ಮಹೇಶ್ ನಾಗರಬೆಟ್ಟ, ತಾಲೂಕ ಆರೋಗ್ಯಾಧಿಕಾರಿ ಕವಿತಾ ದೊಡ್ಡಮನಿ, ಹಾಗೂ ಜಿ.ಎಮ್ ಕೋಲೂರ, ಆರ್.ಎಮ್ ಹಂಚನಾಳ, ತಳವಾರ, ಡಾ. ಪ್ರಕಾಶ್, ಎನ್.ಆರ್ ಬಾಗವಾನ್, ಬಿ,ಪಿ ಜಕ್ಕನ್ನಗೌಡ್ರ, ರಮೇಶ್ ಅರಕೇರಿ ಸೇರಿದಂತೆ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಈ ಗುಲಾಬಿ ಆಂದೋಲನ ಜಾಥಾ ಮಾರ್ಗದಲ್ಲಿ ಧೂಮಪಾನ ಮಾಡುವ ವ್ಯಕ್ತಿಗಳಿಗೆ ಮತ್ತು ಪಾನ್ ಬೀಡಾ ಅಂಗಡಿಗಳಿಗೆ ಗುಲಾಬಿ ಹೂಗಳನ್ನು ನೀಡುತ್ತಾ ಜಾಥಾವು ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಪ್ರಾರಂಭವಾಗಿ ಶಾಸ್ತ್ರಿ ಮಾರ್ಕೆಟ್, ಗಾಂಧಿ ಸರ್ಕಲ್ ಮಾರ್ಗವಾಗಿ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮುಕ್ತಾಯಗೊಂಡಿತು.