ಕಲಬುರಗಿ,ಏ.18: ವಿಧಾನಸಭೆ ಚುನಾವಣೆ ತರಬೇತಿಗೆ ಪ್ರಾಂಶುಪಾಲರು ಮತ್ತು ಕಾಲೇಜಿನ ಸಿಬ್ಬಂದಿಗಳನ್ನು ನಿಯೋಜಿಸಿರುವ ಕಾರಣ ಇದೇ ಏಪ್ರಿಲ್ 20 ರಿಂದ ಪ್ರಾರಂಭವಾಗಬೇಕಿದ್ದ ಗುಲಬರ್ಗಾ ವಿಶ್ವವಿದ್ಯಾಲಯದ ಪದವಿ ಕೋರ್ಸಿನ ಎಲ್ಲಾ ಪರೀಕ್ಷೆಗಳನ್ನು ಏಪ್ರಿಲ್ 27ಕ್ಕೆ ಮುಂದೂಡಲಾಗಿದೆ.
ಪರಿಷ್ಕೃತ ಪರೀಕ್ಷಾ ವೇಳಾಪಟ್ಟಿ ನಂತರ ತಿಳಿಸಲಾಗುವುದು. ಈ ಬದಲಾವಣೆಯನ್ನು ಪ್ರಾಂಶುಪಾಲರು ಮತ್ತು ವಿದ್ಯಾರ್ಥಿಗಳು ಗಮನಿಸಬೇಕು ಎಂದು ವಿ.ವಿ.ಯ ಕುಲಸಚಿವರು(ಪರೀಕ್ಷಾಂಗ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.