ಗುಲಬರ್ಗಾ‌‌ ವಿ.ವಿ. ಘಟಿಕೋತ್ಸವ:ನೇರ ಪ್ರಸಾರ ವೀಕ್ಷಣೆಗೆ ಅವಕಾಶ

ಕಲಬುರಗಿ,ಜೂ.18: ಗುಲಬರ್ಗಾ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಜೂನ್ 19 ರಂದು ಬೆಳಿಗ್ಗೆ 11.30 ಗಂಟೆಗೆ ನಡೆಯುವ ವಿಶ್ವವಿದ್ಯಾಲಯದ 41ನೇ ಘಟಿಕೋತ್ಸವ ಕಾರ್ಯಕ್ರಮದ ನೇರ ಪ್ರಸಾರವನ್ನು‌ ವಿ.ವಿ. ಅಂತರ್ಜಾಲ https://gug.ac.in/page/live-events ಮೂಲಕ ಸಾರ್ವಜನಿಕರು ವೀಕ್ಷಿಸಬಹುದಾಗಿದೆ ಎಂದು ಕುಲಸಚಿವ ಬಿ. ಶರಣಪ್ಪ ತಿಳಿಸಿದ್ದಾರೆ.