ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ರಾಷ್ಟ್ರೀಯ ಸಮ್ಮೇಳನ

ಕಲಬುರಗಿ,ನ.29: ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಹಾಗೂ ಕೊಲ್ಕತ್ತಾ ಭಾರತೀಯ ವಿಜ್ಞಾನ ಕಾಂಗ್ರೆಸ್ ಅಸೋಸಿಯೆಷನ್ ಬೆಂಗಳೂರು ಚಾಪ್ಟರ್ ಇವುಗಳ ಸಹಯೋಗದಲ್ಲಿ “ಸುಸ್ಥಿರ ಭವಿಷ್ಯಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ಜಾಗತಿಕ ದೃಷ್ಟಿಕೋನ ” ಕುರಿತು ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಸಮಾರಂಭ ಡಿ. 1, 2023 ರಂದು ಬೆಳಿಗ್ಗೆ 10 ಗಂಟೆಗೆ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಜರುಗಲಿದೆ.
ಭಾರತೀಯ ವಿಜ್ಞಾನ ಕಾಂಗ್ರೆಸ್ ಅಸೋಷಿಯೇಶನ್ ಮಾಜಿ ಪ್ರಧಾನ ಅಧ್ಯಕ್ಷ ಡಾ. ವಿಜಯಲಕ್ಷ್ಮಿ ಸಕ್ಷೇನ ಉದ್ಘಾಟಿಸಿ ಮಾತನಾಡುವರು. ಮುಖ್ಯ ಅತಿಥಿಯಾಗಿ ಗುಲಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಹಾಗೂ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪೆÇ್ರ. ಎಸ್. ಆರ್. ನಿರಂಜನ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಖಾನಾಪುರ ಐಎಸ್‍ಸಿಎ ಮಾಜಿ ಪ್ರಧಾನ ಅಧ್ಯಕ್ಷ ಡಾ. ಅಶೋಕ್ ಕುಮಾರ್ ಸಕ್ಷೇನ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಐಎಸ್‍ಸಿಎ ಮಾಜಿ ಪ್ರಧಾನ ಅಧ್ಯಕ್ಷ ಹಾಗೂ ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪೆÇ್ರ. ಕೆ. ರಂಗಪ್ಪ ಪ್ರಧಾನ ಭಾಷಣ ಮಾಡುವರು.
ಮುಖ್ಯ ಅತಿಥಿಗಳಾಗಿ ಕಾವೇರಿ ಗ್ರೂಪ್ ಆಪ್ ಇನ್ಸ್ಟಿಟ್ಯೂಷನ್‍ನ ಡೀನ್ ಹಾಗೂ ಐಎಸ್‍ಸಿಎ ಕಾರ್ಯಕಾರಿ ಮಂಡಳಿ ಸದಸ್ಯ ಪೆÇ್ರ. ಎಸ್. ಶ್ರೀಕಂಠಸ್ವಾಮಿ, ಬೆಂಗಳೂರಿನ ಐಎಸ್‍ಸಿಎ ಮಾಜಿ ಪ್ರಧಾನ ಕಾರ್ಯದರ್ಶಿ ಪೆÇ್ರ. ಎಸ್. ರಾಮಕೃಷ್ಣ, ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ರೇμÁ್ಮ ಕೌರ್, ವಿದ್ಯಾ ವಿμÉೀಯಕ ಪರಿಷತ್ ಸದಸ್ಯೆ ಪೆÇ್ರ. ಉಮಾವತಿ ಭಾಗವಹಿಸುವರು. ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ. ದಯಾನಂದ ಅಗಸರ ಅಧ್ಯಕ್ಷತೆ ವಹಿಸುವರು. ಕುಲಸಚಿವ ಡಾ. ಬಿ. ಶರಣಪ್ಪ, ಬೆಂಗಳೂರು ಐಎಸ್‍ಸಿಎ ಚಾಪ್ಟರನ ಸಂಯೋಜಕ ಪೆÇ್ರ. ಗಂಗಾಧರ್ ಉಪಸ್ಥಿತರಿರುವರು ಎಂದು ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಹಾಗೂ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ ಪೆÇ್ರ. ಕೆ. ವಿಜಯಕುಮಾರ್ ತಿಳಿಸಿದ್ದಾರೆ.
ಡಿ.1 ರಂದು ಮೊದಲ ಗೋಷ್ಠಿ ಅಪರಾಹ್ನ 12.10 ಗಂಟೆಗೆ ಆರಂಭವಾಗಲಿದ್ದು, ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ ‘ಮೈಕ್ರೋಬಯಲ್ ಡೈವರ್‍ಸಿಟಿ ಅಂಡ್ ಬಯೋ ಪ್ರೋಸಸ್ ಟೆಕ್ನಾಲಜೀಸ್ ವಿಷಯ ಕುರಿತು ಯೋಜನಾ ಉಪನ್ಯಾಸ ನೀಡುವರು. ಗೋಷ್ಠಿಯ ಅಧ್ಯಕ್ಷರಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದ ಡೀನ್ ಪ್ರೊ. ಕೆ. ಲಿಂಗಪ್ಪ ಹಾಗೂ ಸಹ ಅಧ್ಯಕ್ಷರಾಗಿ ಡಾ. ಬಿ. ರಾಮಕೃಷ್ಣ ರೆಡ್ಡಿ ವಹಿಸಲಿದ್ದಾರೆ.
ಪ್ರಾಣಿಶಾಸ್ತ್ರ ವಿಭಾಗ ಡಾರ್ವಿನ್ ಸಭಾಂಗಣದಲ್ಲಿ ಎರಡನೇ ಗೋಷ್ಠಿ ನಡೆಯಲಿದ್ದು, ಪ್ರೊ. ಪರಮಜ್ಯೋತಿ ಸ್ವಾಮಿ ಅಧ್ಯಕ್ಷತೆ ಹಾಗೂ ಡಾ. ಎನ್. ಎಸ್.ವಾಲಿ ಸಹ ಅಧ್ಯಕ್ಷತೆಯಲ್ಲಿ ಡಾ. ಇನಾಯತ್ತುಲ್ಲಾ ನಯಾಸುದ್ದಿನ್ ಅವರು “ಅಡವಾನ್ಸಸ್ ಇನ್ ಅಕ್ಯುಕಲ್ಚರ್ ಟೆಕ್ನಾಲಜಿ: ಹೌ ಫುಲ್ ಫಿಲ್ ಹುಮನ್ ನೀಡ್ಸ್, ಪ್ರಾಸಪ್ಟೆಕ್ಟ್ಸ್ ಅಂಡ್ ಎಂಪ್ಲಾಯಮೆಂಟ್ ಆಪರ್ಚುನಿಟಿಸ್ ಇನ್ ಇಂಡಿಯಾ ಅಂಡ್ ಓವರ್‍ಸಿಸ್” ಹಾಗೂ ಪ್ರೊ. ನಾಗರಾಜ ಬಿ. ಸಿ. “ಇಂಡಿಯಾಸ್ ಅಜೆಂಡಾಸ್ ಆನ್ ಅಚೀವಿಂಗ್ ಕ್ಲೈಮೇಟ್ ಚೇಂಜ್ ಅಂಡ್ ಸಸ್ಟೈನೇಬಲ್ ಡೆವಲಪಮೆಂಟ್ ಗೋಲ್ಸ್” ವಿಷಯ ಕುರಿತು ಉಪನ್ಯಾಸ ನೀಡುವರು. ನಂತರ ಮೂರನೇ ಗೋಷ್ಠಿಯ ಪ್ರೊ. ಬಿ. ವಂಸಂತ್ ಕುಮಾರ್ ಅಧ್ಯಕ್ಷತೆ ಹಾಗೂ ಡಾ. ಈಶ್ವರ್ ಲಾಲ್ ಸೇಡಂಕುಮಾರ್ ಸಹ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಸಮ್ಮೇಳನದ ಅಂಗವಾಗಿ ಸಾಯಂಕಾಲ 6 ಗಂಟೆಗೆ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಸಾಂಸ್ಕøತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
ಎರಡನೇ ದಿನದ ನಾಲ್ಕನೇ ಗೋಷ್ಠಿ ಬೆಳಿಗ್ಗೆ 8:30 ಗಂಟೆಗೆ ಆರಂಭವಾಗಲಿದ್ದು, ಕಲ್ಕತ್ತದ ಐಎಸ್‍ಸಿಎ ಕಾರ್ಯಕಾರಿ ಕೌನ್ಸಿಲ್ ಸದಸ್ಯ ಹಾಗೂ ಮೈಸೂರು ವಿಶ್ವವಿದ್ಯಾಲಯದ ಪ್ರೊ. ಎಸ್. ಶ್ರೀಕಂಠಸ್ವಾಮಿ “ನ್ಯಾನೋ ಮೆಟೀರಿಯಲ್ ಅಂಡ್ ಪೊಟೆನ್ಸಿಯಲ್ ಯುಸಸ್ ಇನ್ ಎನ್ವಿರಾನಮೆಂಟಲ್ ಅಪ್ಲಿಕೇಷನ್” ವಿಷಯ ಕುರಿತು ಯೋಜನಾ ಉಪನ್ಯಾಸ ನೀಡುವರು. ಮೈಸೂರು ವಿಶ್ವವಿದ್ಯಾಲಯದ ಸೂಕ್ಷ್ಮಶಾಸ್ತ್ರ ವಿಭಾಗದ ಡಾ. ಎಂ. ವೈ ಶ್ರೀನಿವಾಸ “ ಗಟ್ ಮೈಕ್ರೋಬೆಸ್ – ನೋ ಲಾಂಗರ್ ಫರ್‍ಗಟನ್ ಪ್ಲೇಯರ್ಸ್ ” ವಿಷಯ ಕುರಿತು ಉಪನ್ಯಾಸ ನೀಡುವರು. ಪ್ರೊ. ಲಲಿತಾ ಜುನ್ನ ಗೋಷ್ಠಿಯ ಅಧ್ಯಕ್ಷರಾಗಿ ಹಾಗೂ ಡಾ. ರೇಣುಕಾ ಖಪ್ಲೆ ಸಹ ಅಧ್ಯಕ್ಷತೆವಹಿಸುವರು.
ಐದನೇ ಗೋಷ್ಠಿಯು ಪ್ರೊ. ಸುಲೋಚನಾ ಅವರ ಅಧ್ಯಕ್ಷತೆ ಹಾಗೂ ಪ್ರೊ. ಶಶಿಕಾಂತ್ ಹೆಚ್. ಮಜಗಿ ಅವರ ಸಹ ಅಧ್ಯಕ್ಷತೆಯಲ್ಲಿ ಕುವೆಂಪು ವಿಶ್ವವಿದ್ಯಾಲಯದ ಪರಿಸರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ. ಜೆ. ನಾರಾಯಣ“ವೆಟ್‍ಲ್ಯಾಂಡ್ಸ್ ಬಯೋಡೈವರಸಿಟಿ ವೆಲ್ಯುಸ್ ಮೇಜರ್ ಥ್ರೆಟ್ಸ್ ಅಂಡ್ ಕನ್ಜರ್‍ವೇಷನ್ ಮೆಸರ್ಸ್” ಹಾಗೂ ಮೈಸೂರು ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ. ಎಸ್. ಬಸವರಾಜಪ್ಪ “ ಅಕ್ವೇಟಿಕ್ ಇನಸೆಕ್ಟಸ್ ಡೈವರ್ಸಿಟಿ ಅಂಡ್ ಇಂಪ್ಯಾಕ್ಟ್ ಆಪ್ ಎನ್ವಿರಾನಮೆಂಟಲ್ ಡಿಗ್ರೇಡೇಷನ್ ಮಿಡ್ಸ್ಟ್‍ಟ್ ವೆಸ್ಟರನ್ಘಾಟ್ಸ್ ರೀಜನ್ ಆಪ್ ಸಕಲೇಶಪುರು, ಕರ್ನಾಟಕ” ವಿಷಯ ಕುರಿತು ಉಪನ್ಯಾಸ ನೀಡುವರು. ನಂತರದ ಆರನೇ ಪೋಸ್ಟರ್ ಪ್ರಸಂಟೇಷನ್ ಗೋಷ್ಠಿಯ ಅಧ್ಯಕ್ಷರಾಗಿ ಪ್ರೊ. ಜೆ. ನಾರಾಯಣ ಹಾಗೂ ಸಹ ಅಧ್ಯಕ್ಷರಾಗಿ ಡಾ. ಎಂ. ವೈ. ಶ್ರೀನಿವಾಸ ವಹಿಸುವರು.