ಗುರು ಹಿರಿಯರನ್ನು ಗೌರವಿಸಿ ಭಜಿಸೋಣ: ವಡಿಗೇರಿ

ಕೆಂಭಾವಿ:ಜು.5:ಗುರು ಪೂರ್ಣಿಮೆ ಒಂದು ದಿನಕ್ಕೆ ಸೀಮಿತವಾಗಿದೆ ನಿತ್ಯ ನಿರಂತರ ಗುರು ಹಿರಿಯರನ್ನು ಶ್ರದ್ಧಾ ಭಕ್ತಿಯಿಂದ ಗೌರವಿಸಿದಾಗ ನಮ್ಮ ಜೀವನ ಪಾವನವಾಗುತ್ತದೆ ಎಂದು ಮಲ್ಲಯ್ಯ ಸ್ವಾಮಿ ವಡಿಗೇರಿ ಹೇಳಿದರು
ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಶ್ರೀ ಗುರು ಕಾಂತೇಶ್ವರ ಜನ ಕಲ್ಯಾಣ ಸೇವಾ ಪ್ರತಿಷ್ಠಾನದ ವತಿಯಿಂದ ಜರುಗಿದ ಮಾಸಿಕ ಹುಣ್ಣಿಮೆಯ ಶಿವಾನುಭವ ಗೋಷ್ಠಿಯನ್ನು ಉದ್ಘಾಟಿಸಿ ಉಪನ್ಯಾಸ ನೀಡಿದ ಅವರು ಅಜ್ಞಾನದ ಕತ್ತಲು ಕಳೆದು ಸುಜ್ಞಾನದ ಸಂಸ್ಕಾರ ನೀಡುವಾತನೆ ಗುರು ಅಂತಹ ಜ್ಞಾನೋಪಾಸಕರಾಗಿದ್ದ ಗುರು ಗುರುಗಳನ್ನು ಭಕ್ತಿ ಭಾವದಿಂದ ಬಜಿಸಿದಾಗ ಜೀವನ ಸಾರ್ಥಕವಾಗುತ್ತದೆ ಎಂದರು.
ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಷ ಬ್ರ ಚನ್ನಬಸವ ಶಿವಾಚಾರ್ಯರು ಯಶಸ್ವಿಯಾಗಿ 8 ವರ್ಷ ಪೂರೈಸಿ 9 ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಹುಣ್ಣಿಮೆಯ ಕಾರ್ಯಕ್ರಮಕ್ಕೆ ಸದ್ಭಕ್ತರು ನೀಡಿದ ಸಹಕಾರ ಅನನ್ಯ ಎಂದರು. ಇದೇ ವೇಳೆ ಗುರು ಪೂರ್ಣಿಮೆಯ ನಿಮಿತ್ಯ ಸದ್ಭಕ್ತರೇಲ್ಲ ಸೇರಿ ಶ್ರೀಗಳನ್ನು ವಿಶೇಷವಾಗಿ ಸನ್ಮಾನಿಸಿ ಗೌರವಿಸಿದರು.
ಉಪತಹಸೀಲ್ದಾರ್ ಮಲ್ಲಿಕಾರ್ಜುನ ಪಾಟೀಲ್, ಹಿರಿಯರಾದ ಲಿಂಗನಗೌಡ ಮಾಲಿ ಪಾಟೀಲ್, ಶಿಕ್ಷಕ ನಿಂಗನಗೌಡ ದೇಸಾಯಿ, ಗುಡದಯ್ಯ ದಾವಣಗೆರೆ, ಪ್ರಶಾಂತ ಹಿರೇಮಠ, ಅಭಿಷೇಕ ಪಾಟೀಲ, ನಿಜಗುಣಿ ವಿಶ್ವಕರ್ಮ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಯಮನೇಶ ಯಾಳಗಿ, ಶರಣಕುಮಾರ ಯಾಳಗಿ ಇವರಿಂದ ಸಂಗೀತ ಕಾರ್ಯಕ್ರಮ ಮೂಡಿ ಬಂತು. ಡಾ ಯಂಕನಗೌಡ ಪಾಟೀಲ್ ಮಾಲಹಳ್ಳಿ ನಿರೂಪಿಸಿ ವಂದಿಸಿದರು.