ಕಲಬುರಗಿ:ಸೆ.24:ಹೆತ್ತವರನ್ನು ಪೂಜಿಸಿ, ಗುರು ಹಿರಿಯರನ್ನು ಪ್ರಶಿಕ್ಷಣಾರ್ಥಿಗಳು ಗೌರವಿಸಬೇಕು ಎಂದುಖ್ಯಾತ ಶಿಕ್ಷಣ ತಜ್ಞದೇವಿಂದ್ರ ವಿಶ್ವಕರ್ಮ ಹೇಳಿದರು.ಅವರುಜೇವರ್ಗಿ ನಗರದ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಮಾಡುತ್ತಾ ಮಾತನಾಡಿದಅವರು, ಮುಂಬರುವ ದಿನಗಳಲ್ಲಿ ಐವತ್ತು ಸಾವಿರ ಶಿಕ್ಷಕರ ನೇಮಕಾತಿ ನಡೆಯಲಿದ್ದು, ಪ್ರಶಿಕ್ಷಣಾರ್ಥಿಗಳು ಈಗಿನಿಂದಲೇತಯಾರಿ ಮಾಡಿಕೊಳ್ಳಬೇಕು.ಅತ್ಯುತ್ತಮ ಶಿಕ್ಷಕರಾಗಿ ಹೊರಹೊಮ್ಮಬೇಕು.ಪ್ರಶಿಕ್ಷಣಾರ್ಥಿಗಳು ಉತ್ತಮ ಸಂಸ್ಕಾರ-ಸಂಸ್ಕøತಿ ಅಳವಡಿಸಿಕೊಳ್ಳಬೇಕು.ಅದರಿಂದ ಒಳ್ಳೆಯ ವ್ಯಕ್ತಿತ್ವ ನಿರ್ಮಾಣವಾಗುತ್ತದೆ.ಪ್ರಶಿಕ್ಷಣಾರ್ಥಿಗಳು ಅಮೂಲ್ಯ ವಿಚಾರಗಳನ್ನು ಮಕ್ಕಳಿಗೆ ಕಲಿಸಬೇಕು.ಅವರ ಮನಸ್ಸು ಹದವಾದ ಭೂಮಿಇದ್ದಂತೆಅಲ್ಲಿ ಒಳ್ಳೆಯ ಸಂಸ್ಕಾರ-ಸಂಸ್ಕøತಿಯನ್ನು ಕಲಿಸಬೇಕು ಆಗ ಮಾತ್ರ ಸಮಾಜಕ್ಕೆ ಒಳ್ಳೆಯ ವ್ಯಕ್ತಿಗಳು ಸಿಗುತ್ತಾರೆ.ಪ್ರಶಿಕ್ಷಣಾರ್ಥಿಗಳು ತಮ್ಮಜೀವನದಲ್ಲಿ ಸಾಕಾರಗೊಳ್ಳುವ ಕನಸು ಕಂಡು, ಉನ್ನತ ಹಂತಕ್ಕೇರಿ ಸಾಧನೆತೋರಬೇಕು.ಅಂಕಗಳಿಕೆಯೋಂದರಿಂದಲೇ ಜೀವನ ಪರಿಪೂರ್ಣಅಲ್ಲ. ಉತ್ತಮ ವ್ಯಕ್ತಿತ್ವವೂಅವಶ್ಯ.ಅಂಕದಜೊತೆಗೆ ವಿನಯವೂ ಬೇಕು.ನಾವು ದಿನನಿತ್ಯಕಲಿಯುತ್ತಲೇಇರಬೇಕು.ವಿದ್ಯಾರ್ಥಿಗಳಿಗೆ ಎಲ್ಲಾರೀತಿಯಿಂದ ಬೆನ್ನೆಲುಬಾಗಿತಂದೆ-ತಾಯಿಓದಲು ನೆರವಾಗುತ್ತಾರೆ. ವಿದ್ಯಾರ್ಥಿಗಳುಅವರಿಗೆಕೊಡುವ ಬಹುದೊಡ್ಡಉಡುಗೊರೆಯೆಂದರೆಉತ್ತಮ ಫಲಿತಾಂಶ. ಆದ್ದರಿಂದ ಪ್ರಶಿಕ್ಷಣಾರ್ಥಿಗಳು ಜೀವನ ಸಾಕಾರಕ್ಕೆ ಕನಸು ಕಾಣಬೇಕುಎಂದು ಶಿಕ್ಷಣ ತಜ್ಞದೇವಿಂದ್ರ ವಿಶ್ವಕರ್ಮ ಹೇಳಿದರು. ಈ ಸಂದರ್ಭದಲ್ಲಿಉಪಪ್ರಾಚಾರ್ಯರಾದ ಶಿವಸಾಯಿ ಮಮದಾಪೂರ, ಪ್ರಶಿಕ್ಷಣಾರ್ಥಿಗಳಾದ ಅಶ್ವಿನಿ, ಐಶು ಎಮ್, ತಾಯಮ್ಮ, ಶಿವಾನಿ, ಭಾಗ್ಯಶ್ರೀ, ಸವಿತಾ, ಶರಣಗೌಡ ಬಂಡಿ, ಸಕ್ಕರೆಪ್ಪ, ಇಸ್ಮಾಯಿಲ್, ರಿಯಾಜ್, ಶಿವರಾಜ್ ಸೇರಿ ಮುಂತಾದವರು ಹಾಜರಿದ್ದರು.