ಗುರು ಸ್ಪಂದನ ಕಾರ್ಯಕ್ರಮ

????????????????????????????????????

ಸಿರುಗುಪ್ಪ ಸೆ 25  :  ಎಲ್ಲಾ ಶಿಕ್ಷಕರು ಕಡ್ಡಾಯವಾಗಿ ಕೋವಿಡ್ ಲಸಿಕೆ ಪಡೆಯಬೇಕು, ನಿರ್ಲಕ್ಷ್ಯವಹಿಸಿದಲ್ಲಿ ಸರ್ಕಾರದ ಆದೇಶದನ್ವಯ ಮುಂದಿನ ದಿನಗಳಲ್ಲಿ ಶಾಲೆಯಿಂದ ಹೊರಗುಳಿಯಬೇಕಾಗುತ್ತದೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಡಿ.ಭಜಂತ್ರಿ ಹೇಳಿದರು.
ನಗರದ ಎಸ್.ಇ.ಎಸ್ ಬಾಲಕೀಯರ ಪ್ರೌಢಶಾಲೆಯ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ಗುರುಸ್ಪಂದನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ನಂತರ ಮಾತನಾಡಿದ ಅವರು ತುರ್ತು ರಜೆಗಳು ಪ್ರತಿಯೊಬ್ಬ ಶಿಕ್ಷಕರ ಆಸ್ತಿಯಾಗಿದ್ದು ಕೆಲವೊಂದು ಸಮೀಕ್ಷೆಗಳಲ್ಲಿ ಕಾರ್ಯ ನಿರ್ವಹಿಸಿದ ಬಗ್ಗೆ ಆಯಾ ಇಲಾಖೆಗಳಿಗೆ ಸಂಬಂದಪಟ್ಟ ದೃಡೀಕರಣ ಪತ್ರ ತಂದಲ್ಲಿ ಎಲ್ಲರಿಗೂ ತುರ್ತುರಜೆಗಳ ಪಟ್ಟಿಯಲ್ಲಿ ಸೇರಿಸಲಾಗುವುದು.
  ನಾವೆಲ್ಲಾ ಮಕ್ಕಳ ಹೆಸರಿನಲ್ಲಿಯೇ ಜೀವನ ನಿರ್ವಹಿಸುತ್ತಿದ್ದು ಪ್ರತಿಯೊಬ್ಬ ಮಗುವನ್ನು ಸ್ವತ: ತಮ್ಮ ಮಕ್ಕಳಂತೆ ಕಲಿಕಾ ಪ್ರಗತಿಯೊಂದಿಗೆ ಆರೋಗ್ಯ, ಆಟ, ಪಾಠಗಳ ಬಗ್ಗೆ ಗಮನವಹಿಸಿ, ಓದು, ಬರಹದ ಜೊತೆ ಮೌಲ್ಯಯುತ ಶಿಕ್ಷಣದೊಂದಿಗೆ ವಸತಿಯುತ ಶಾಲೆಗಳ ಪ್ರವೇಶಾತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ದಗೊಳಿಸಿ, ಮಕ್ಕಳ ಉನ್ನತ ವ್ಯಾಸಂಗಕ್ಕೆ ದಾರಿದೀಪವಾಗಬೇಕೆಂದು ತಿಳಿಸಿದರು.
  ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ವತಿಯಿಂದ ಗುರುಸೇವಾ ಆ್ಯಪ್ ಬಿಡುಗಡೆ ಮಾಡಲಾಯಿತು.
  ಇದೇ ಸಂಧರ್ಭದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಗೌರವಾಧ್ಯಕ್ಷ ಸೂರ್ಯಕಾಂತರೆಡ್ಡಿ, ಅಧ್ಯಕ್ಷ ಹೆಚ್.ಜೆ.ಶ್ರೀಧರ, ಕಾರ್ಯದರ್ಶಿ ಹನುಮನಗೌಡ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಉಪಾಧ್ಯಕ್ಷ ಬಸವನಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ವ್ಯವಸ್ಥಾಪಕ ಚಂದ್ರಕಾಂತ್, ಇ.ಸಿ.ಓ ಬಸವರಾಜಯ್ಯ  ಸೇರಿದಂತೆ ಶಿಕ್ಷಕ ಮತ್ತು ಶಿಕ್ಷಕಿಯರಿದ್ದರು.