
ಸಂಜೆವಾಣಿ ವಾರ್ತೆ
ಸಿರುಗುಪ್ಪ, ಏ.07: ತಾಲೂಕಿನ ಗೋಸಬಾಳು ಗ್ರಾಮದ ಗುರು ಸಿದ್ದಲಿಂಗೇಶ್ವರ ಸ್ವಾಮಿಯ ರಥೋತ್ಸವ ಗುರುವಾರ ಸಂಜೆ ಅದ್ದೂರಿಯಾಗಿ ನಡೆಯಿತು.
ಗ್ರಾಮದ ದೇವಸ್ಥಾನದ ಡೊಳ್ಳು ಸೇರಿದಂತೆ ಸಕಲ ಮಂಗಲ ವಾದ್ಯಗಳೊಂದಿಗೆ ಗುರು ಸಿದ್ದಲಿಂಗೇಶ್ವರ, , ಬಿಳಿಕುದುರೇಶ್ವರ, ಪಂಚಲಿಂಗೇಶ್ವರ,ಮರಿಲಿಂಗೇಶ್ವರ ಸ್ವಾಮಿಗಳ ‘ಬಿಳಿ ಕುದುರೆ’ ‘ಕಂಚು ಕುದುರೆ’ ‘ಮರಿಗುದುರೆ’ಗಳಿಗೆ ‘ಮಂದೇ ಪೂಜೆಯನ್ನು ಸಲ್ಲಿಸಲಾಯಿತು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ದೇವಸ್ಥಾನಕ್ಕೆ ತಂದು ‘ಗಂಗೆ ಪೂಜೆ’ ಸಲ್ಲಿಸಿದರು.
ಸಂಜೆ ರಥಕ್ಕೆ ಹೂವಿನ ಅಲಂಕಾರದೊಂದಿಗೆ ಗುರುವಿನ ಪಂಚಣ್ಣ ಇವರ ಮನೆಯಿಂದ ‘ಕುಂಭ’ ವನ್ನು ಮೆರವಣಿಗೆ ಮೂಲಕ ತಂದು ರಥಕ್ಕೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಗ್ರಾಮದ ಅರ್ಚಕರು ಚಾಲನೆ ನೀಡಿದರು.
ಭಕ್ತರು ಹೂ ಹಾಗೂ ಬಾಳೆಕಾಯಿ ರಥಕ್ಕೆ ಎಸೆದು ಭಕ್ತಿಯನ್ನು ಮೆರೆದರು.
ಸುತ್ತಮುತ್ತಲಿನ ಗ್ರಾಮಗಳಾದ ಬಲಕುಂದಿ, ಬೂದುಗುಪ್ಪ, ಪಪ್ಪನಾಳು, ಮೈಲಾಪುರ, ಕರೂರು ಹಾಗೂ ತಾಲ್ಲೂಕಿನ ವಿವಿಧ ಗ್ರಾಮಗಳ ಸಾವಿರಾರು ಭಕ್ತರು ಇದ್ದರು.
ರಥೋತ್ಸವ ಪ್ರಯುಕ್ತ ಶುಕ್ರವಾರ ರಾತ್ರಿ ‘ರತಿ ಕಲ್ಯಾಣ’ ಅರ್ಥಾತ್ ‘ಕೌಂಡ್ಲಿಕನ ವಧೆ ‘ ಪೌರಾಣಿಕ ನಾಟಕವನ್ನು ಆಯೋಜಿಸಲಾಗಿದೆ ಎಂದು ಗ್ರಾಮದ ಮುಖಂಡರು ತಿಳಿಸಿದರು.
One attachment • Scanned by Gmail