ಗುರು ಸರ್ವೋತ್ತಮ ಪ್ರಶಸ್ತಿ ಪ್ರದಾನ

ಕಲಬುರಗಿ,ಫೆ.19-ಕರ್ನಾಟಕ ರಾಜ್ಯ (6-8) ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘದ ಜಿಲ್ಲಾ ಘಟಕದ ವತಿಯಿಂದ ನೂತನವಾಗಿ ನೇಮಕಗೊಂಡ ಬಿ.ಪಿ.ದಿ. ಶಿಕ್ಷಕರಿಗೆ ಸ್ವಾಗತ ಸಮಾರಂಭ, ಹಾಗು 18.ಸಿ.ಎಸ್.ಆರ್. ನಿಯಮಗಳ ಕುರಿತು ಶೈಕ್ಷಣಿಕ ಕಾರ್ಯಾಗಾರ, ಜಿಲ್ಲಾ ಮಟ್ಟದ ಗುರು ಸರ್ವೋತ್ತಮ ಪ್ರಶಸ್ತಿ ಸಮಾರಂಭ ನಗರದ ವೀರಶೈವ ಕಲ್ಯಾಣ ಮಂಟಪ ಸಾರ್ವಜನಿಕ ಉದ್ಯಾನವನದಲ್ಲಿ ನಡೆಯಿತು.
ಡಿಸಿಸಿ ಬ್ಯಾಂಕ್ ಜಿಲ್ಲಾ ಉಪಾಧ್ಯಕ್ಷ ಸುರೇಶ್ ಸಜ್ಜನ್ ಅವರು ಕಾರ್ಯಕ್ರಮ ಉದ್ಘಾಟಿಸಿದರು.
ಉಪನಿರ್ದೇಶಕರಾದ ಬಸಂತಿಬಾಯಿ ಡಿ ಅಕ್ಕಿ ಸಂಘದ ರಾಜ್ಯ ಅಧ್ಯಕ್ಷ ಪಿ ಮುರಳಿಧರ್, ಕಾರ್ಯದರ್ಶಿ ವಿದ್ಯಾಧರ ಭಾವಿಕಟ್ಟಿ, ಚಂದ್ರಕಾಂತ್ ಪಿ ತಳವಾರ್, ಸೈಯದ್ ಎಸ್ ಜೆ ಇನಾಮ್ದಾರ್, ಪ್ರಭಾಕರ್ ಶೀಲವಂತ, ಮಾದೇವ ಚಿತಲಿ, ಶ್ರೀಮತಿ ಸೇವಂತಾ ಪಿ ಚೌಹಾಣ್, ಜಿಲ್ಲಾ ಪದಾಧಿಕಾರಿಗಳು ಹಾಗೂ ತಾಲೂಕ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.
ಸಂಘದ ಸದಸ್ಯರು ಮತ್ತು ಶಿಕ್ಷಕರು ಶಿಕ್ಷಕರ ಅಭಿಮಾನಿಗಳು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಇದೇ ಸಮಯದಲ್ಲಿ ಜಿಲ್ಲಾ ಮಟ್ಟದ ಗುರು ಸರ್ವೋತ್ತಮ ಪ್ರಶಸ್ತಿ ತಾಲೂಕ ಮತ್ತು ಜಿಲ್ಲಾ 36 ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು.