ಗುರು ಶಿಷ್ಯರ ಸಂಬಂಧ ಅನ್ಯೋನ್ಯವಾಗಿದೆ : ಎಮ್ ಎನ್ ಚಿಂಚೋಳಿ,

ಅಥಣಿ : ಎಲ್ಲೆಡೆ ಸಾಮಾಜಿಕವಾಗಿ ಮನಸ್ಸನ್ನು ಕೆರಳಿಸುವ ಕಾರ್ಯಗಳೇ ಸೃಷ್ಟಿಯಾಗುವ ಸಂದರ್ಭದಲ್ಲಿ ಮನಸ್ಸನ್ನು ಅರಳಿಸುವ ಅವಕಾಶಗಳು ವಿರಳವಾಗಿವೆ. ಇಂತಹ ಮನಸ್ಸನ್ನು ಅರಳಿಸುವ ಅಪರೂಪದ ಕಾರ್ಯಕ್ರಮಗಳಲ್ಲಿ ಈ ಗುರುವಂದನಾ ಕಾರ್ಯಕ್ರಮವು ಒಂದು ವಿಶಿಷ್ಟವಾಗಿದೆ ಎಂದು ಸಿಎಸ್ ಕೆ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಎಮ್ ಎನ್ ಚಿಂಚೋಳಿ ಅವರು ಹೇಳಿದರು.
ಸ್ಥಳೀಯ ಸಿ ಎಸ್ ಕಿತ್ತೂರ ಪ್ರೌಢಶಾಲೆಯಲ್ಲಿ 2004-07ನೇ ಸಾಲಿನ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನಾ ಸಮಾರಂಭ ಹಾಗೂ ಸ್ನೇಹ ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಸಿದ್ದೇಶ್ವರ ಶಿವಯೋಗಿ ಶ್ರೀಗಳು ಮರುಳಶಂಕರ ದೇವರುಗಳಂತಹ ಪವಿತ್ರ ಶರಣರು ನಡೆದಾಡಿದ ಪಾವನ ಕ್ಷೇತ್ರ. ಕೆ ಎಲ್ ಇ ಶಿಕ್ಷಣ ಸಂಸ್ಥೆಯ ಪರಿಣಾಮ ಇಲ್ಲಿ ಓದಿದ ಎಲ್ಲ ವಿದ್ಯಾರ್ಥಿಗಳು ಸ್ಪೂರ್ತಿ ಪಡೆದು ಉತ್ತಮ ಸಂಸ್ಕಾರ ರೂಢಿಸಿಕೊಂಡು ದೇಶ ವಿದೇಶಗಳಲ್ಲಿ ಜೀವನ ರೂಪಿಸಿಕೊಂಡಿದ್ದಾರೆ ಎಂದರು.
ಮುಖ್ಯ ಅತಿಥಿ ಡಾ.ಬಾಳಾಸಾಹೇಬ ಲೋಕಾಪುರ ಅವರು ಮಾತನಾಡಿ ಗುರು ಮತ್ತು ಶಿಷ್ಯರ ಸಂಬಂದ ಶಿಕ್ಷಕರ ಕೈಯಲ್ಲಿ ಕಲೆತರೆ ಶಿಷ್ಯರಲ್ಲ ಅವರು ವಿದ್ಯಾರ್ಥಿ ಆಟ ಪಾಟ ಕಲಿಸಿದರೆ ಗುರು ಅಲ್ಲ ಅವರು ಶಿಕ್ಷಕರು, ಗುರಿಯನ್ನು ಇಟ್ಟುಕೊಂಡು ಗುರುವನ್ನು ಹುಡಿಕಿದಾಗ ಅದರ ಅಭಿರುಚಿ ನಮಗೆ ತಲುಪುತ್ತದೆ ಎಂದರು.

ಅನಂತರ ಟಿ, ಕೆ ಜಯಪ್ರಕಾಶ, ಅಧ್ಯಾಪಕಿ ಎ ಆರ್ ಪಾಟೀಲ, ಎಸ್ ಎ ನಿರ್ವಾನಿ, ಎಸ್ ಎಸ್ ಹಳಬರ, ಎನ್ ಬಿ ಕಳ್ಳಿಗುದ್ದಿ, ಬಿ ಜಿ ಕೋತ, ಸಿ ಪಿ ದೇವರುಶಿ, ಅಧ್ಯಾಪಕಿ ಪಿ ವಾಯ್ ಗೋಕಾಕ, ಎಸ್ ಎ ಗೋಟೆ, ಎಮ್ ಆರ್ ಶ್ರೀಗಿರಿ, ಶಿವಾನಂದ ಲಮಾಣಿ, ಲಕ್ಷ್ಮಿ ಪೂಜಾರಿ, ವಿದ್ಯಾ ರೋಕಡಿ, ಮಲ್ಲಿಕಾರ್ಜುನ ಬಾಳಿಕಾಯಿ, ಶ್ರೀಧರ ದರಿಗೌಡ, ಉಮರ ಸೈಯದ ಪ್ರಶಾಂತ ಯಲ್ಲಟ್ಟಿ, ರೇಣುಕಾ ಗುಮಟಿ, ರಾಜು ಯಳಮಲ್ಲೆ, ಲಕ್ಷ್ಮೀ ಚಿಮ್ಮಡ, ಅವರು ಮಾತನಾಡಿ ಸವಿನೆನಪುಗಳನ್ನು ಮೆಲುಕು ಹಾಕಿದರು.