ಗುರು ವಂದನಾ ಸಂಗೀತ ಸಂಭ್ರಮ

ಕಲಬುರಗಿ,ಜು.14-ನಗರದ ಮಾಣಿಕೇಶ್ವರ ಕಾಲೋನಿಯ ಮಾತ ಮಾಣಿಕೇಶ್ವರಿ ದೇವಸ್ಥಾನದಲ್ಲಿ ಗುರು ಪೂರ್ಣಿಮೆಯ ಅಂಗವಾಗಿ ಶ್ರೀ ಗುರು ಶರಣ ಪ್ರಭು ಸಂಗೀತ ಸಾಂಸ್ಕøತಿಕ ಸೇವಾ ಸಂಸ್ಥೆ ವತಿಯಿಂದ ಗುರು ವಂದನಾ ಸಂಗೀತ ಸಂಭ್ರಮ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿದ ಅರ್ಜುನ ಜಮಾದಾರವರು ಮಾತನಾಡಿ, ಗುರುಗಳು ಶಿಷ್ಯರನ್ನು ತಾಯಿಯಂತೆ ಕೈಹಿಡಿದು ಮಮತೆಯಿಂದ, ಪ್ರೀತಿಯಿಂದ ತಮ್ಮೆಲ್ಲಾ ಶಕ್ತಿಯೊಂದಿಗೆ ಶಿಷ್ಯನನ್ನು ಗಮನಿಸಿ ಅವರ ಉದ್ದಾರಕ್ಕಾಗಿಯೇ ಶ್ರಮಿಸುತ್ತಿರುತ್ತಾರೆ. ಪ್ರತಿ ಕ್ಷಣ ಪ್ರತಿ ಸಮಯ ಅವನ ಬಗ್ಗೆ ಅಂದರೆ ಶಿಷ್ಯನ ಬಗ್ಗೆ ವಿಚಾರವನ್ನು ಮಾಡಿ ಅವನನ್ನು ಉದ್ಧಾರ ಮಾಡುತ್ತಾರೆ. ಗುರುಗಳ ಮಾರ್ಗದರ್ಶನದಲ್ಲಿ ನಡೆದು ಭವ ಸಾಗರದಂತೆ ಇರುವ ನಮ್ಮ ಜೀವನ ನೌಕೆಯನ್ನು ಗುರುಗಳೇ ನಡೆಸಬಲ್ಲರು ಎಂದರು.
ಮುಖ್ಯಅತಿಥಿಗಳಾಗಿ ಜಗನ್ನಾಥ ಭಿಮನಾಳ, ರಾಜು ಸೊನ್ನ, ಶರಣು ಬಮನಳ್ಳಿ, ಓಂಕಾರ ಜೋಕೆ ಸಂಸ್ಥೆಯ ಅಧ್ಯಕ್ಷರು ಹಿರಿಯ ಕಲಾವಿದರದ ಸೈದಪ ಚೌಡಾಪೂರ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಕಲಾವಿದರದ ಅಣ್ಣರಾವ ಮತ್ತಿಮುಡ, ತೇಜು ನಾಗುಜಿ, ಬಂಡಯ್ಯ ಸ್ವಾಮಿಜಿ ಸುಂಟನೂರ, ಶ್ರೀಶೈಲ ಕೊಂಡೇದ, ಶಿವಕುಮಾರ ಬೆಡಜೇವರ್ಗಿ, ಚೇತನ ಬೀದಿಮನಿ, ವಿನೋದ ದಸ್ತಾಪುರ, ನಾಗಲಿಂಗಯ್ಯ ಸ್ಥಾವರ ಮಠ, ಸಂತೋಷ ಕೋಡ್ಲಿ, ಮೌನೇಶ ಪಂಚಾಳ, ಅಭಿಷೇಕ ಮಠಪತಿ, ಪ್ರದೀಪ ಗಾರುಳೆ, ಸುರೇಶ ಗುಳಗಿ ,ಸುಂದರಬಾಯಿ ಮಾನೆ, ರತ್ನಬಾಯಿ ಡಿಗ್ಗಿ ,ಮಲ್ಲಮ್ಮ ಗಾಣಾಗಾಪುರ ಇವರುಗಳಿಂದ ಗುರು ವಂದನಾ ಸಂಗೀತ ಸಂಭ್ರಮ ಕಾರ್ಯಕ್ರಮಗಳು ಅಹೋರಾತ್ರಿ ಜರುಗಿದವು. ಬಂಡಯ್ಯ ಶಾಸ್ತ್ರೀಜಿ ಹಿರೇಮಠ ನಿರೂಪಿಸಿದರು.