
ಭಾಲ್ಕಿ: ಮಾ.19:63ನೇ ದಿನದ ಮನೆಗೊಂದು ಅನುಭವ ಮಂಟಪ ಕಾರ್ಯಕ್ರಮವು ಮಲ್ಲಮ್ಮ ವಿಶ್ವನಾಥ ನಾಗನಕೆರೆ ಹೊಸ ಎಫರ್ಟ್ ಜಿಮ ಲೇಡೀಸ್ ಯೋಗಾ ಸೆಂಟರ ಹನುಮಾನ ಮಂದಿರದ ಹಿಂದುಗಡೆ ಗುರು ಕಾಲೋನಿ ಗಂಜ ಭಾಲ್ಕಿ ಅವರ ಮನೆಯಲ್ಲಿ ಜರುಗಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೆವರು,
ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು ಹಿರೇಮಠ ಸಂಸ್ಥಾನ ಭಾಲ್ಕಿ ಅವರ ಮಾರ್ಗದರ್ಶನದೊಂದಿಗೆ ಅವರ ಸಮ್ಮುಖದಲ್ಲಿ ನೆರವೇರಿತು. ಬಳಿಕ ಶ್ರೀಗಳು ಆಶೀರ್ವಚನ ನೀಡಿದರು. ಸಾವಿತ್ರಿ ರಾಜಕುಮಾರ ಮರೂರಕರ ಭಾಲ್ಕಿ ಯೋಗ ಮತ್ತು ಪ್ರಸಾದದ ಪ್ರಾಮುಖ್ಯತೆಯ ಬಗ್ಗೆ ಅನುಭಾವ ನೀಡಿದರು. ಪ್ರಸಾದ” ಪದವು ಅನೇಕ ಧಾರ್ಮಿಕಾಚರಣೆಗಳಲ್ಲಿ ಬಳಕೆಯಲ್ಲಿದೆ. ಆದರೆ ಲಿಂಗಾಯತ ಧರ್ಮದಲ್ಲಿ ಪ್ರಸಾದದ ಪರಿಕಲ್ಪನೆ ತುಂಬ ಉದಾತ್ತವಾದುದಾಗಿದೆ. ಸ್ಥಾವರಲಿಂಗಕ್ಕೆ ನೈವೇದ್ಯ ಮಾಡಿ ಪಡೆಯುವ ಹಣ್ಣು-ಹಾಲು-ಆಹಾರ ಇವುಗಳನ್ನು ಪ್ರಸಾದವೆಂದು ಉಳಿದ ಧರ್ಮದ ಭಕ್ತರು ನಂಬಿದರೆ, ಶರಣರು ಹೇಳಿರುವ ಪ್ರಸಾದದ ಪರಿಕಲ್ಪನೆಗಳು ವಿನೂತನವಾದವುಗಳಾಗಿದೆ. ಗುರುವಿಲ್ಲದವಂಗೆ ಲಿಂಗವಲ್ಲಲಿಂಗವಿಲ್ಲದವಂಗೆ ಜಂಗಮವಿಲ್ಲ
ಜಂಗಮವಿಲ್ಲದವಂಗೆ ಪ್ರಸಾದವಿಲ್ಲಪ್ರಸಾದವಿಲ್ಲದವಂಗೆ ನಿರ್ವಾಣವಿಲ್ಲ”-ಆದಯ್ಯ.
ಗುರು-ಲಿಂಗ-ಜಂಗಮವಿಲ್ಲದವರಿಗೆ ಪ್ರಸಾದವಿಲ್ಲವೆಂದು ಆದಯ್ಯ ಹೇಳಿದರೆ, ಪಾದೋದಕದಿಂದ ಪದಂ ನಾಸ್ತಿಯಾಗಿರಬೇಕೆಂದು ಮೋಳಿಗೆ ಮಾರಯ್ಯ ಹೇಳಿದ್ದಾರೆ. ಹೀಗೆ ಶರಣರು ಪ್ರಸಾದದ ಬಗೆಗೆ ತಮ್ಮದೇ ಆದ ವ್ಯಾಖ್ಯಾನಗಳನ್ನು ನೀಡಿದ್ದಾರೆ. ಅಷ್ಟಾವರಣಗಳಲ್ಲಿ ಒಂದಕ್ಕೊಂದು ಸಂಬಂಧವಿದೆ. ಅವು ಕೇವಲ ಹೊರಾವರಣಗಳಾಗದೆ, ಒಳಗೆ ಬೆಳೆಯಬಹುದಾದ ಶಕ್ತಿ ಸಂಕೇತಗಳಾಗಿವೆ. ಗುರುವೇ ಪ್ರಸಾದ ಲಿಂಗವೇ ಪ್ರಸಾದ ಜಂಗಮವೇ ಪ್ರಸಾದ ಎಂದು ಹೇಳಿದರು
ಗುರು ಬಸವ ಪೂಜೆ ಹಾಗೂ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಸವ ಪ್ರಾರ್ಥನೆಯನ್ನು ವಿದ್ಯಾವತಿ ಸೋಮನಾಥಪ್ಪ ಅಷ್ಟುರೆ ಭಾಲ್ಕಿ ನೆರವೇರಿಸಿದರು. ವೇದಿಕೆಯ ಮೇಲೆ ಶಾರದಾ ಬಾಬುರಾವ್ ಹುಣಜೆ, ಡಾ. ಸುಪ್ರಿಯಾ ಪಾಟೀಲ್, ಮಲ್ಲಮ್ಮ ಆರ್ ಪಾಟೀಲ್ ಮಲ್ಲಮ್ಮ ನಾಗನಕೆರೆ ಉಪಸ್ಥಿತರಿದ್ದರು.
ಸಾವಿತ್ರಿ ಧನರಾಜ ಪಾಟೀಲ ಭಾಲ್ಕಿ ನಿರೂಪಿಸಿದರು. ಪಟ್ಟಣದ ಅನೇಕ ಶರಣ ಶರಣೆಯರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಅನೇಕರನ್ನು ಗೌರವ ಸನ್ಮಾನ ಮಾಡಲಾಯಿತು. ಮಂಗಲ ಹಾಗೂ ಪ್ರಸಾದದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು ಎಂದು ಶ್ರೀ ಶಾಂತಯ್ಯ ಸ್ವಾಮಿ ತಿಳಿಸಿದರು.