ಗುರು ರಾಘವೇಂದ್ರ ಬ್ಯಾಂಕ್ ನ 114 ಕೋಟಿ ಮೌಲ್ಯದ ಆಸ್ತಿ ಇಡಿ ಜಪ್ತಿ

ಬೆಂಗಳೂರು,ಮಾ.28- ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್​ನ 114 ಕೋಟಿ ರೂ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ(ಇಡಿ)ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಠೇವಣಿಯ ದುರುಪಯೋಗದ ಹಿನ್ನೆಲೆಯಲ್ಲಿ
ಪಿಎಂಎಲ್ಎ‌ 2002ರ ಕಾಯಿದೆಯಡಿ ಆಸ್ತಿಯನ್ನು ಇಡಿ ಜಪ್ತಿ ಮಾಡಿದೆ.
ಬ್ಯಾಂಕ್​ನಲ್ಲಿ ನಡೆದ ಸಾರ್ವಜನಿಕ ಈ ಕ್ರಮ ಜರುಗಿಸಲಾಗಿದೆ ಇಡಿ ಅಧಿಕಾರಿಗಳು ಬ್ಯಾಂಕ್​ಗೆ ಸಂಬಂಧಿಸಿದ ಒಟ್ಟು 21 ಸ್ಥಿರಾಸ್ತಿಗಳನ್ನು ಜಪ್ತಿ ಮಾಡಿದೆ. ಖಾಲಿ ಭೂಮಿ, ಮನೆಗಳು, ಕಮರ್ಷಿಯಲ್‌, ಕೈಗಾರಿಕಾ ಬಿಲ್ಡಿಂಗ್​ಗಳನ್ನು ಜಪ್ತಿ ಮಾಡಿದೆ.
ಜೊತೆಗೆ ಚರಾಸ್ಥಿ ರೂಪದ 3.15 ಕೋಟಿ ರೂ ಬ್ಯಾಂಕ್ ಬ್ಯಾಲೆನ್ಸ್ ಕೂಡ ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ ಅಧಿಕೃತ ಮಾಹಿತಿ ನೀಡಿದೆ. ಬ್ಯಾಂಕ್​ನಿಂದ ಸಾಲ ಪಡೆದು ಸಾಲ ಮರುಪಾವತಿ ಮಾಡದೇ ಸುಸ್ತಿದಾರರಾಗಿರುವವರ ಆಸ್ತಿ-ಜಪ್ತಿಯನ್ನು ಜಪ್ತಿ ಮಾಡಲಾಗಿದೆ.