ಗುರು ರಾಘವೇಂದ್ರ ಬ್ಯಾಂಕಿಗೆ ನೂತನ ಆಡಳಿತಾಧಿಕಾರಿ

ಬೆಂಗಳೂರು, ನ.20- ಬಸವನಗುಡಿಯ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್​ನ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಆಡಳಿತಾಧಿಕಾರಿಯಾಗಿ ಆರ್.ಅಶೋಕನ್ ಅವರನ್ನು ನೇಮಿಸಲಾಗಿದೆ.

ಈ ಹಿಂದೆ ಬ್ಯಾಂಕಿಂಗ್ ತಜ್ಞರನ್ನು ನೇಮಿಸುವಂತೆ ಹೈಕೋರ್ಟ್ ಸೂಚಿಸಿತ್ತು. ಈ ಹಿನ್ನೆಲೆ ನಿವೃತ್ತ ಜನರಲ್ ಮ್ಯಾನೇಜರ್ ಆರ್. ಅಶೋಕನ್ ಅವರನ್ನು ನೇಮಿಸಲಾಗಿದೆ ಎಂದುರಾಜ್ಯ ಸರ್ಕಾರ ಹೈಕೋರ್ಟಿಗೆ ಮಾಹಿತಿ ನೀಡಿದೆ.

ಹಿಂದಿನ ಆಡಳಿತಾಧಿಕಾರಿ ಅವಧಿಯಲ್ಲಿ ಸಾಲ ವಸೂಲಾತಿ ಮಾಡಲಾಗಿದೆಯೇ ಪರಿಶೀಲಿಸಬೇಕು.ಜತೆಗೆ ಸಾಲದ ಖಾತೆಗಳ ಮುಕ್ತಾಯದ ಬಗ್ಗೆ ವಿಚಾರಣೆ ನಡೆಸಬೇಕು. ಬಾಕಿಯಿರುವ ಸಾಲ ವಸೂಲಿಗೆ ಕೈಗೊಂಡ ಕ್ರಮ ತಿಳಿಸಬೇಕು ಎಂದು ನೂತನ ಆಡಳಿತಾಧಿಕಾರಿಗೆ ಹೈಕೋರ್ಟ್ ಸೂಚನೆ ನೀಡಿದೆ.