ಗುರು ಮುನಿನಾಗಪ್ಪನವರ ಆರಾಧನೆ

ಕೋಲಾರ, ಆ.೩- ತಾಲ್ಲೂಕಿನ ಶೆಟ್ಟಿವಾರಹಳ್ಳಿಯಲ್ಲಿ ಶ್ರೀಗುರು ಮುನಿನಾಗಪ್ಪ ಅವಧೂತರ ಆರಾಧನೆಯನ್ನು ಶ್ರದ್ಧಾಭಕ್ತಿಗಳಿಂದ ಆಚರಿಸಲಾಯಿತು.
ಗುರು ಮುನಿನಾಗಪ್ಪ ಸ್ವಾಮಿ ಸೇವಾ ಟ್ರಸ್ಟ್ ಆಶ್ರಯದಲ್ಲಿ ಗ್ರಾಮದಲ್ಲಿನ ಅವಧೂತರ ಮಂದಿರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಪೂಜಾ ಕೈಂಕರ್ಯಗಳ ನೇತೃತ್ವವನ್ನು ಪುರಹಳ್ಳಿ ಅರುಣಾಂಭ ಹಾಗೂ ಥಣಿಸಂದ್ರ ಶ್ರೀನಿವಾಸಮೂರ್ತಿ ಕುಟುಂಬದವರು ವಹಿಸಿದ್ದು, ಗುರುಗಳಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.
ಮುನಿನಾಗಪ್ಪ ಅವಧೂತರು ಬೇಡಿದ್ದನ್ನು ಕೊಡುವ ಗುರುವೆಂದು ನಂಬಿರುವ ಭಕ್ತರು ಪ್ರತಿವರ್ಷ ಶ್ರಾವಣ ಮಾಸದ ಶುದ್ದ ಚತುರ್ಥಿಯ ದಿನ ಅವರ ಆರಾಧನೆಯನ್ನು ನಡೆಸಿಕೊಂಡು ಬಂದಿದ್ದು, ಭಕ್ತರ ಸಹಕಾರದಿಂದ ಮಂದಿರವನ್ನು ಸುಂದರವಾಗಿ ನಿರ್ಮಿಸಲಾಗಿದೆ.
ಆರಾಧನೆ ಅಂಗವಾಗಿ ನಾಗರಾಜ ಚಾರ್ಯ ರವರಿಂದ ಭಜನೆ ಹಾಗೂ ಪ್ರವಚನ ಕಾರ್ಯಕ್ರಮವೂ ನಡೆಯಿತು. ಪೂಜಾ ಕಾರ್ಯಕ್ರಮದಲ್ಲಿ ಪುರಹಳ್ಳಿ ರಘು, ಮೋಹನ್, ಕಾಡುಗೋಡಿ ನಾಗರಾಜ್, ಟಿ.ಎಸ್.ಮಂಜುನಾಥ್, ನಾಗಣ್ಣ, ಸತ್ಯನಾರಾಯಣ ಮೂರ್ತಿ ಥನಿಸಂದ್ರ, ನಾಗಭೂಷಣ್, ರಾಮಚಂದ್ರ, ಶಂಕರ್‍ನಾರಾಯಣ, ವೇಮಗಲ್ ರಾಮಚಂದ್ರ, ಟಿ.ಎಸ್.ಮಂಜುನಾಥ್ ಕುಟುಂಬದವರು, ಪುರಹಳ್ಳಿಯ ಲೇಟ್ ಶ್ರೀನಿವಾಸಮೂರ್ತಿ ಕುಟುಂಬದವರು ಪಾಲ್ಗೊಂಡಿದ್ದು, ಸ್ವಾಮಿಯ ಆರಾಧನೆ ಅಂಗವಾಗಿ ಸಮಾರಾಧನೆ ನಡೆಸಲಾಯಿತು.