ಗುರು ಭದ್ರೆಶ್ವರ ಸ್ವಾಮಿ ಜಾತ್ರೆ ರಥೋತ್ಸವ ರದ್ದು

ಬೀದರ:ಎ.27: ತಾಲ್ಲೂಕಿನ ಬಾವಗಿ ಗ್ರಾಮದಲ್ಲಿ ಏಪ್ರಿಲ್ 28ರಿಂದ ಏಪ್ರಿಲ್ 30 ರವರೆಗೆ ನಡೆಯಬೇಕಾದ ಗುರು ಭದ್ರೆಶ್ವರ ಮಹಾರಥೋತ್ಸವ, ಪಲ್ಲಕ್ಕಿ ಶರಣ ತತ್ವ ಚಿಂತನಾ ಗೋಷ್ಠಿ, ಧರ್ಮ ಸಮಾರಂಭ ಕಾರ್ಯಕ್ರಮಗಳನ್ನು ಕೊರೊನಾ ಸೋಂಕಿನ ಪ್ರಯಕ್ತ ರದ್ದುಗೊಳಿಸಲಾಗಿದೆ

ಜಾತ್ರಾ ಮಹೋತ್ಸವದಲ್ಲಿ ಕರ್ನಾಟಕ ಆಂದ್ರಪ್ರದೇಶ ಮಹಾರಾಷ್ಟ್ರ ರಾಜ್ಯದ ಸಾವಿರಾರು ಸಂಖ್ಯೆಯಲ್ಲಿ ಜನ ಪಾಲ್ಗೊಳ್ಳುತ್ತಿದ್ದರು

ಇಂಥ ವೈಭವದ ಜಾತ್ರೆಯನ್ನು ಕೊರೊನಾ ಕಾರಣಕ್ಕೆ ರದ್ದುಗೊಳಿಸಲಾಗಿದೆ ರಾಜ್ಯದ ಜನರ ಒಳಿತಿಗಾಗಿ ಮುಖ್ಯಮಂತ್ರಿ ಬಿ.ಎಸ ಯಡಿಯೂರಪ್ಪ. ಅವರು ಮಾಡಿದ ಲಾಕ ಡೌನ್ ಆದೇಶವನ್ನು ಸರ್ವರೂ ಕಡ್ಡಾಯವಾಗಿ ದೊಡ್ಡ ಗಂಡಾಂತರದಿ ತಪ್ಪಿಸಿಕೊಳ್ಳಲು ಭಕ್ತ ಸಮೂಹ ಸಹಕರಿಸಬೇಕು, ಭಕ್ತ ಸಮೂಹ ಮನೆಯಲ್ಲಿ ಅಂದು ಸರಳವಾಗಿ ಭದ್ರೆಶ್ವರ ಭಾವಚಿತ್ರಕ್ಕೆ ಪುಷ್ಪ ಬಿಲ್ವಾ ಸಮರ್ಪಣೆ ಮಾಡುವ ಮುಖಾಂತರ ಜಾತ್ರೆ ಆಚರಿಸಿಕೊಳ್ಳಬೇಕು ಎಂದು ಗುರು ಭದ್ರೆಶ್ವರ ಮಠದ ಶ್ರೀ ಶಿವಕುಮಾರ್ ಭದ್ರಯ್ಯಾ ಸ್ವಾಮಿ ತಿಳಿಸಿರುತ್ತಾರೆ.