ಗುರು ಬಸವಣ್ಣನವರು ಸರ್ವ ಶ್ರೇಷ್ಠ ಆರ್ಥಿಕ ತಜ್ಞರಾಗಿ, ಸಾಮಾಜಿಕ ಸುಧಾರಕರಾಗಿ ಲೋಕಕ್ಕೆ ಬೆಳಕಾಗಿದ್ದಾರೆ :ಡಾ. ಅತಿವಾಳೆ

ಬೀದರಃಮೇ.15: ಮೌಢÀ್ಯತೆಯ ವಿರುದ್ಧ 12ನೇ ಶತಮಾನದಲ್ಲಿ ಕ್ರಾಂತಿಗೈದ ಬಸವಣ್ಣನವರು ಜಗತ್ತಿನ ಸರ್ವ ಶ್ರೇಷ್ಠ ಆರ್ಥಿಕ ತಜ್ಞರಾಗಿ, ಸಾಮಾಜಿಕ ಸುಧಾರಕರಾಗಿ ಲೋಕಕ್ಕೆ ಬೆಳಕಾಗಿದ್ದಾರೆ, ಅವರ ತತ್ವ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿದಾಗ ಮಾತ್ರ ಅವರ ಜಯಂತಿ ಉತ್ಸವ ಆಚರಿಸಿದಕ್ಕೂ ಸಾರ್ಥಕವಾಗುತ್ತದೆ ಎಂದು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಡಾ. ಸಂಜೀವಕುಮಾರ ಅತಿವಾಳೆ ನುಡಿದರು.
ಅವರು ನಗರದ ಜನವಾಡಾ ರಸ್ತೆಯಲ್ಲಿರುವ ಸ್ಪರ್ಧಾ ಸಂಕಲ್ಪ ಅಕಾಡೆಮಿಯಲ್ಲಿ ಆಯೊಜಿಸಿದ ವಿಶ್ವಗುರು ಬಸವಣ್ಣನವರ ಜಯಂತಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ 110ನೇ ಸಂಸ್ಥಾಪನೆ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಅವರು ಮುಂದುವರೆದು ಮಾತನಾಡಿ, ಕನ್ನಡ ಸಾಹಿತ್ಯಕ್ಕೆ ವಚನ ಸಾಹಿತ್ಯದ ಕೊಡುಗೆ ಶ್ರೇಷ್ಠವಾದದ್ದು ಅಂತಹ ಸಾಹಿತ್ಯ ಭಾμÉ ಸಂಸ್ಕøತಿ ಉಳಿಸುವ ನಿಟ್ಟಿನಲ್ಲಿ ಶತಮಾನೋತ್ಸವ ಸಂಭ್ರಮದ ಕನ್ನಡ ಸಾಹಿತ್ಯ ಪರಿಷತ್ತಿನ ಪಾತ್ರ ಗಣನೀಯವಾದದ್ದು ಜಗತ್ತಿನಲ್ಲಿಯೇ ಅತಿ ಹೆಚ್ಚು ಸದಸ್ಯತ್ವವನ್ನು ಹೊಂದಿರುವ ಸಂಸ್ಥೆ ಸಾಹಿತ್ಯ ಪರಿಷತ್ತಾಗಿದೆ ಎಂದರು.
ಗಡಿ ಭಾಗದಲ್ಲಿ ಕನ್ನಡದ ಬೆಳವಣಿಗೆಗೆ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಕೂಡ ಕನ್ನಡ ಅಭಿವೃದ್ಧಿಗಾಗಿ ಪರಿಷತ್ತಿನೊಂದಿಗೆ ಕೆಲಸ ಮಾಡಲು ಇಚ್ಛಿಸುತ್ತದೆ ಎಂದರು.
ಸ್ಪರ್ಧಾ ಸಂಕಲ್ಪ ಅಕಾಡೆಮಿ ಅಧ್ಯಕ್ಷ ನಾಗೇಶ ಸ್ವಾಮಿ ಮಾತನಾಡಿ ಕನ್ನಡ ನಾಡು-ನುಡಿಗಾಗಿ ಅನೇಕ ಸಾಹಿತಿಗಳು ಕಲಾವಿದರು, ಹೋರಾಟಗಾರರು ಶ್ರಮದಿಂದ ಇವತ್ತು ಗಡಿ ಭಾಗದಲ್ಲಿ ಕನ್ನಡ ಉಳಿದುಕೊಂಡಿದೆ ಎಂದರು.
ಮಹಿಳಾ ಘಟಕದ ತಾಲ್ಲೂಕಾ ಕಸಾಪ ಅಧ್ಯಕ್ಷರಾದ ಶ್ರೀಮತಿ ರೂಪಾ ಪಾಟೀಲ ಮಾತನಾಡಿ, ಚಿಕ್ಕಂದಿನಿಂದಲೆ ಬಸವಣ್ಣನವರ ವಚನಗಳು ನಮ್ಮ ಅಜ್ಜಿ ಮತ್ತು ತಂದೆ ತಾಯಿ ನನಗೆ ತಿಳಿಸಿಕೊಡುತಿದ್ದರು. ನೂರಕ್ಕೂ ಹೆಚ್ಚು ವಚನಗಳು ನಮ್ಮ ಅಜ್ಜಿ ಬಾಯಾಪಾಠವಾಗಿ ಹೇಳುತ್ತಾರೆ. ವಚನ ಸಾಹಿತ್ಯ ಜನರ ಬದುಕಿಗೆ ಮಾರ್ಗದಶಿಯಾಗಿದೆ ಎಂದರು. ಜಿಲ್ಲಾ ಗೌರವ ಕಾರ್ಯದರ್ಶಿ ಟಿ. ಎಂ. ಮಚ್ಛೆ ವೇದಿಕೆಯ ಮೇಲೆ ಉಪಸ್ಥಿತಿರಿದ್ದರು. ಇದೇ ಸಂದರ್ಭದಲ್ಲಿ ಡಾ. ಸಂಜೀವಕುಮಾರ ಅತಿವಾಳೆ ಹಾಗೂ ನಾಗೇಶ್ ಸ್ವಾಮಿ ಅವರಿಗೆ ತಾಲ್ಲೂಕು ಕಸಾಪದಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲ್ಲೂಕು ಕಸಾಪ ಅಧ್ಯಕ್ಷ ಎಂ. ಎಸ್. ಮನೋಹರ ಅವರು ವಹಿಸಿಕೊಂಡು ಮಾತನಾಡಿ ಬಸವಣ್ಣನವರನ್ನು ಸಾಂಸ್ಕøತಿಕ ನಾಯಕರೆಂದು ಘೊಷಿಸಿದ್ದಕ್ಕಾಗಿ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು.. ಗೌರವ ಕಾರ್ಯದರ್ಶಿ ಪ್ರೊ. ಜಗನ್ನಾಥ ಕಮಲಾಪೂರೆ ಕಾರ್ಯಕ್ರಮದ ಸಂಚಾಲನೆ ಮಾಡಿದರು. ಮೊದಲಿಗೆ ಅಕಾಡೆಮಿಯ ವಿದ್ಯಾರ್ಥಿಗಳು ವಚನ ಗಾಯನ ನಡೆಸಿಕೊಟ್ಟರು. ಸಿದ್ಧಾರೂಢ ಭಾಲ್ಕೆ ಸ್ವಾಗಿತಿಸಿದರು. ಕೊನೆಯಲ್ಲಿ ಅಶೋಕ ದಿಡಗೆ ವಂದಿಸಿದರು.